anigif mufti

anigif athiratha

adweb

raj vishnu

'ಎಂಸಿಬಿ' ವಿಡಿಯೋ ಆಲ್ಬಂ ಬಿಡುಗಡೆ :

 

ಇತ್ತೀಚಿನ ದಿನಗಳಲ್ಲಿ ರ್ಯಾಂಪ್ ಮ್ಯೂಸಿಕ್ ಆಲ್ಬಂ ಕನ್ನಡದಲ್ಲೂ ಹೊಸ ಕ್ರೇಜ್ ಹುಟ್ಟಿಸುತ್ತಿದೆ. ಸಾಮಾನ್ಯವಾಗಿ ಹಾಲಿವುಡ್, ಬಾಲಿವುಡ್‍ನಲ್ಲಷ್ಟೇ ಹೆಸರಾಗಿದ್ದ ಈ ಸಂಸ್ಕøತಿ ಇದೀಗ ಕನ್ನಡದಲ್ಲೂ ಅಷ್ಟೇ ಜನಪ್ರಿಯತೆ ಗಳಿಸುತ್ತಿದೆ. ಕಳೆದ ವರ್ಷ ರಿಲೀಸಾಗಿದ್ದ 3 ಪೆಗ್ ಇತ್ತೀಚಿಗಷ್ಟೇ ಹೊರಬಂದ ಬಡ್ಡೆತದೆ ಮೊದಲಾದ ಆಲ್ಬಂಗಳ ಜೊತೆ ಈಗ ಮತ್ತೊಂದು ಹೊಸ ಆಲ್ಬಂ ಸೇರ್ಪಡೆಯಾಗಿದೆ. ಮಿಡ್ಲ್‍ಕ್ಲಾಸ್ ಬಾಯ್ಸ್ (ಎಂಸಿಬಿ) ಎಂಬ ಹೆಸರಿನ ಈ ವಿಡಿಯೋ ಸಾಂಗ್ ಮೊನ್ನೆ ಶ್ರೀ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಯಾಯಿತು. ಚಿರಂಜೀವಿಯವರ ನೃತ್ಯ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟಿ ಪೂಜಾ ಹಾಗೂ ಟೋನಿ ಅಭಿನಯಿಸಿದ್ದಾರೆ.

ಈ ಹಾಡಿಗೆ ಬಂಡವಾಳ ಹಾಕಿ ನಿರ್ಮಿಸಿದ ನಟೇಶ್ ಮಾತಾನಾಡಿ ಇತ್ತೀಚಿನ ದಿನಗಳಲ್ಲಿ ಐಟಿಬಿಟಿಯಿಂ ಕನ್ನಡ ಬಲುದೂರ ಹೋಗಿದೆ ಎಂಬ ಭಾವನೆಯನ್ನು ದೂರಮಾಡಬೇಕೆಂಬ ಉದ್ದೇಶದಿಂದ ಬಹುತೇಕ ಐಟಿಬಿಟಿ ಉದ್ಯೋಗಿಗಳೆ ಸೇರಿ ಮಾಡಿರುವ ವಿಡಿಯೋ ಸಾಂಗ್ ಇದು, ಸಮಾನ ಮನಸ್ಕ ಸ್ನೇಹಿತರು ಐಟಿಬಿಟಿಯಲ್ಲಿ ಕನ್ನಡ ಬಾರದವರನ್ನೆಲ್ಲ ಸೇರಿಸಿಕೊಂಡು ಈ ಹಾಡನ್ನು ಮಾಡಿದ್ದೇವೆ ಎಂದರು.

ಈ ಹಾಡಿನ ನಿರ್ದೇಶಕ ಚಿರಂಜೀವಿ ಮಾತಾನಾಡಿ 6 ತಿಂಗಳ ಹಿಂದೆ ಈ ಸಾಂಗನ್ನು ಪ್ಲಾನ್ ಮಾಡಿದ್ದವು ಬೇರೆ ಭಾಷೆಯವರಿಗಿಂತ ನಾವೇನು ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಲು ಈ ಸಣ್ಣ ಪ್ರಯತ್ನ ಮಾಡಿದ್ದೇವೆ, ಮುಂದೆಯು ಇಂತಹ ಹಲವಾರು ಪ್ರಯತ್ನಗಳನ್ನು ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಎಂಸಿಬಿ ಹಾಡಿನಲ್ಲಿ ಅಭಿನಯಿಸಿದ ನಟಿ ಪೂಜಾ ಮಾತಾನಾಡಿ ನಾನು ಪಸ್ಟ್ ಟೈಮ್ ಆಕ್ಟ್ ಮಾಡಿರುವ ಹಾಡಿದು, ಹಾಡು ಇಷ್ಟೊಂದು ಸುಂದರವಾಗಿ ಮೂಡಿಬರಲು ಡಿಓಪಿ ಉದಯ್‍ರವರೇ ಕಾರಣ, 3 ಪೆಗ್ ಹಾಡಿಗೆ ಖಂಡಿತ ಸ್ಪರ್ಧೆ ನೀಡುವಂತಹ ಸಾಂಗ್ ಇದು ಎಂದು ಹೇಳಿದರು, ನಾಯಕ ನಟ ಟೋನಿ ಮಾತಾನಾಡಿ ಎಲ್ಲೋ ಇದ್ದ ನನ್ನನ್ನು ಈ ಹಾಡಿನಲ್ಲಿ ಆಕ್ಟ್ ಮಾಡಿಸುವ ಮೂಲಕ ಬೆಳಕಿಗೆ ತಂದಿದ್ದಾರೆ ನಟೇಶ್‍ರವರು ಎಂ.ಎನ್.ಸಿ ಟೀಮ್ ನನ್ನನ್ನು ಈವರೆಗೆ ಕರೆದುಕೊಂಡು ಬಂದಿದ್ದಾರೆ. ಒಳ್ಳೆಯ ಕನ್ನಡಿಗರು ನನ್ನನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.

ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ಶಶಾಂಕ್‍ಶೇಷಗಿರಿ ಮಾತಾನಾಡಿ ನಾನು ಈವರೆಗೆ 360 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ ನನ್ನ ಬಾಲ್ಯದ ಗೆಳೆಯ ಚರಣ್‍ರವರಿಂದ ನನಗೆ ಈ ಆಲ್ಬಂನಲ್ಲಿ ಕೆಲಸ ಮಾಡುವ ಅವಕಾಶ ಬಂತು, ಒಳ್ಳೆಯ ಟೋನ್, ಲಿರಿಕ್ ಇದ್ದಾಗ ಹಾಡುವುದಕ್ಕೂ ನಿಜಕ್ಕೂ ಖುಷಿಯಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುರುಳಿ ಮಾಸ್ಟರ್ ಮಾತಾನಾಡಿ ಹೊಸ ಹುಡುಗರಿಗೆ ಪ್ರೋತ್ಸಾಹ ನೀಡಿದರೆ ಖಂಡಿತ ಇಂತಹ ಹಲವಾರು ಎಲೆಮರೆಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಟೋನಿ ಹಾಗೂ ಪೂಜಾ ಅದ್ಬುತವಾಗಿ ಆಕ್ಟ್ ಮಾಡಿದ್ದಾರೆ, ಕ್ಯಾಮರಾ ವರ್ಕ್ ಕೂಡ ಸುಂದರವಾಗಿ ಮೂಡಿ ಬಂದಿದೆ ಎಂದು ಹೇಳಿದರು.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top