Print this page

ಭರದಿಂದ ಸಾಗುತ್ತಿದೆ ಕಿಚ್ಚ ಮತ್ತು ಶಿವಣ್ಣರ 'ದಿ ವಿಲನ್'

ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಈ ಇಬ್ಬರು ನಾಯಕರು ಒಟ್ಟಾಗಿ ಅಭಿನಯಿಸುತ್ತಿದ್ದಾರೆ. 

ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿರುವ ಅಮಿ ಜಾಕ್ಸನ್ ರವರು ಕೂಡಾ 'ದಿ ವಿಲನ್' ಸೆಟ್ ನಲ್ಲಿ ನಿರ್ದೇಶಕ ಪ್ರೇಮ್ ಹೇಳಿದಂತೆ ಅಭಿನಯಿಸುತ್ತಿದ್ದಾರೆ.

ಚಿತ್ರದ ಶೂಟಿಂಗ್ ಚೆನ್ನಾಗಿ ನಡೆಯುತ್ತಿರುವುದರಿಂದ ನಿರ್ದೇಶಕ ಪ್ರೇಮ್ ಕೂಡಾ ತುಂಬಾ ಖುಷಿಯಾಗಿದ್ದಾರೆ.ಸದ್ಯ ಸುದೀಪ್ ಹಾಗೂ ನಟಿ ಅಮಿ ಜಾಕ್ಸನ್ ರವರ ಭಾಗದ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿದ್ದು ಶಿವರಾಜ್ ಕುಮಾರ್ ಕೂಡಾ ಚಿತ್ರ ತಂಡ ವನ್ನು ಸದ್ಯದಲ್ಲಿಯೇ ಸೇರಿಕೊಳ್ಳಲಿದ್ದಾರೆ.

Rate this item
(0 votes)
Login to post comments

Related items