chamak running success

anigif

adweb

raju

ರಾಕ್‌ಲೈನ್ ನಿರ್ಮಾಣದ ಸ್ವಮೇಕ್ ಸಿನಿಮಾದಲ್ಲಿ 'ಪುನೀತ್'

ರಾಜಕುಮಾರ ಚಿತ್ರದ ಅಭೂತಪೂರ್ವ ಯಶಸ್ಸಿನ ಖುಷಿಯಲ್ಲಿರುವ ಪವರ್ ಸ್ಟಾರ್ ಪುನೀತ್ ಹಾಗು ಖ್ಯಾತ ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ರವರು ಜೋಡಿಯಿಂದ ಸಿನಿಮಾ ಬರಲಿದೆ ಎಂಬ ಸುದ್ದಿಯನ್ನು ರಾಕ್ ಲೈನ್ ವೆಂಕಟೇಶ್ ರವರು ಸ್ಪಷ್ಟ ಪಡಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜುಗಲ್ ಬಂದಿಯ ಚಿತ್ರ ರಿಮೇಕ್ ಅಲ್ಲ ಸ್ವಮೇಕ್ ಎಂದು ಸ್ವತ ರಾಕ್ ಲೈನ್ ವೆಂಕಟೇಶ್ ರವರೇ ಹೇಳಿದ್ದಾರೆ.

ಈ ಚಿತ್ರವನ್ನು ತಮೀಳಿನ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನ ಮಾಡಲಿದ್ದು ಕಥೆ ಕೂಡಾ ಅವರೇ ಸಿದ್ಧ ಮಾಡಲಿದ್ದಾರೆ. 11 ವರ್ಷಗಳ ಬಳಿಕ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡಲಿದ್ದು ಇದೊಂದು ದೊಡ್ಡ ಬಜೆಟ್ ನ ಚಿತ್ರವಾಗಲಿದೆ ಎಂದಿದ್ದಾರೆ.

ಪುನೀತ್ ರಾಜ್ ಕುಮಾರ್ ರವರು ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ಬೇರೆ ಯಾವ ಕಲಾವಿದರೂ ಆಯ್ಕೆ ಯಾಗಿಲ್ಲ ಎಂದು ರಾಕ್ ಲೈನ್ ವೆಂಕಟೇಶ್ ರವರು ತಿಳಿಸಿದ್ದಾರೆ. ಸದ್ಯ ಅಂಜನಿ ಪುತ್ರದಲ್ಲಿ ಬಿಝಿಯಾಗಿರುವ ಪುನೀತ್ ರಾಜ್ ಕುಮಾರ್ ಅದನ್ನು ಮುಗಿಸಿದ ಮೇಲೆ ಈ ಚಿತ್ರ ಶುರುಮಾಡಲಿದ್ದಾರೆ.
ತಮೀಳಿನ ವಿಸಾರಣೈ ಚಿತ್ರದ ರೀಮೇಕ್ ಹಕ್ಕು ತನ್ನ ಬಳಿ ಇದ್ದು ಆದರೆ ಆ ಚಿತ್ರವನ್ನು ಹೊಸಬರೊಂದಿಗೆ ಮಾಡುತ್ತೇನೆ ಎಂದು ರಾಕ್ ಲೈನ್ ವೆಂಕಟೇಶ್ ರವರು ಸ್ಪಷ್ಟಪಡಿಸಿದ್ದಾರೆ.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top