mugulu

ad dkd

adweb

raj vishnu

"ಹಲೋ ಮಾಮ" ಎನ್ನುತ್ತಿದ್ದಾರೆ ಬಿಗ್ ಬಾಸ್ ಮೋಹನ್

ನಿರ್ದೇಶಕ /ನಟ ಮೋಹನ್ ಅವರು ಇತ್ತೀಚಿಗೆ ಚಿತ್ರರಂಗದಲ್ಲಿ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ , ಕಿರುತೆರೆಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು,ಸ್ವಲ್ಪ ಮಟ್ಟಿಗೆ ಸುದ್ದಿ ಕೂಡ ಮಾಡಿದ್ದರು. ಇದೀಗ ಮೋಹನ್ ಅವರು ಮತ್ತೆ ಚಿತ್ರರಂಗದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು,ಮೋಹನ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. "ಹಲೋ ಮಾಮ" ಎಂದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿಕೊಂಡಿರುವ ಮೋಹನ್ ಅವರು ಈ ಚಿತ್ರಕ್ಕೆ ನಾಯಕರಾಗೂ ಕಾಣಿಸಿಕೊಳ್ಳುತ್ತಿದ್ದಾರೆ.

"ಹಲೋ ಮಾಮ" ಒಂದು ಪಕ್ಕ ಕಾಮಿಡಿ ಚಿತ್ರವಾಗಿದ್ದು,ತುಂಬಾ ದಿನಗಳ ನಂತರ ಮತ್ತೆ ಕಾಮಿಡಿ ಚಿತ್ರ ಮಾಡಿಟ್ಟಿರುವುದಕ್ಕೆ ಖುಷಿ ಇದೆ. ನಮ್ಮ ದಿನನಿತ್ಯದಲ್ಲಿ ಎಷ್ಟೋ ಜನರು,ಎಷ್ಟ್ಟೊಂದು ಕಡೆ ಈ ಮಾಮ ಅನ್ನೋ ಹೆಸರು ಬಳಕೆಯಾಗುತ್ತದೆ, ಅದರ ಸುತ್ತ ಕಥೆ ಹೆಣೆದಿದ್ದೇನೆ. ಮನರಂಜನೆಗೆ ಏನು ಎಲ್ಲಾವನ್ನು ಚಿತ್ರಕಥೆಯಲ್ಲಿ ಅಳವಡಿಸಿದ್ದೇನೆ. ಅರವಿಂದ್ ರಾವ್ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕಿಯರಾಗಿ 

ಭೂಮಿಕಾ,ಸೌಜನ್ಯ ಮತ್ತು ಸಂಪ್ರತ ಅವರು ನಟಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಗತಿ ಸಿನಿ ಕ್ರಿಯೇಷನ್ಸ್ ಮೂಲಕ ಬಿ.ಕೆ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅಂದಂಗೆ "ಹಲೋ ಮಾಮ" ಚಿತ್ರಕ್ಕೆ "ಥೂ..!! ಹಂಗ್ ಕರೀಬೇಡಿ" ಎಂಬ ಟ್ಯಾಗ್ ಲೈನ್ ಇದೆ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top