chamak running success

anigif

adweb

raju

ಪಿಲಿಬೈಲ್ ಯಮುನಕ್ಕಾ ಖ್ಯಾತಿಯ ಸೂರಜ್ ಶೆಟ್ಟಿ ಯ ಹೊಸ ಚಿತ್ರ 'ಅಮ್ಮೆರ್ ಪೋಲೀಸಾ'

ಪಿಲಿಬೈಲ್ ಯಮುನಕ್ಕ ಚಿತ್ರದ ಬಳಿಕ ತುಳುವಿನ ಸ್ಟಾರ್ ನಿರ್ದೇಶಕ ಸೂರಜ್ ಶೆಟ್ಟಿ ಅವರ ಇನ್ನೊಂದು ಚಿತ್ರ 'ಅಮ್ಮೇರ್ ಪೋಲೀಸಾ' ಚಿತ್ರ ಮಾಡಲಿದ್ದಾರೆ.ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣದ ಕೆಲಸಗಳು ಆರಂಭವಾಗಲಿದೆ.

ಸೂರಜ್ ಶೆಟ್ಟಿ ಹೇಳುವಂತೆ ಇದೊಂದು ಹೊಸ ಬಗೆಯ ಚಿತ್ರ ಹೊಸ ಮಾದರಿಯಲ್ಲಿ ಚಿತ್ರ ಕತೆ ಸಾಗಲಿದೆ.ಕರಾವಳಿ ರಂಗಭೂಮಿ ಕಲಾವಿದರ ಜೊತೆ ಹೊಸಬರನ್ನು ಹಾಕಿಕೊಂಡು ಚಿತ್ರ ಮಾಡುವ ಯೋಜನೆ ಇದೆ.ಹೊಸಬರಿಗೂ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ.ಚಿತ್ರದ ಕತೆ,ಚಿತ್ರಕಥೆ ಅಂತಿಮ ಹಂತದಲ್ಲಿದ್ದು ಹಿಂದಿನ ದಾಟಿಗಿಂತ ಭಿನ್ನ ದಾಟಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಡುವುದು ಈ ಭಾರಿ ನನ್ನ ಚಿತ್ರದಲ್ಲಿ ನಡೆಯಲಿದೆ ಎನ್ನುತ್ತಾರೆ.

ಸೂರಜ್ ಶೆಟ್ಟಿ ಏನು ಮಾಡಿದರೂ ಕೂಡ ಅದರಲ್ಲಿ ವಿಶೇಷತೆ ಇದ್ದೇ ಇರುತ್ತದೆ ಎನ್ನುವ ಮಾತನ್ನು ಅವರು ಮತ್ತೆ ಸಾಬೀತು ಮಾಡಿದ್ದಾರೆ.ಪಿಲಿಬೈಲ್ ಯಮುನಕ್ಕ ಚಿತ್ರದ ನಂತರ 'ಇಂಗ್ಲೀಷ್' ಸಿನಿಮಾಕ್ಕೂ ಮೊದಲು 'ಅಮ್ಮೇರ್ ಪೋಲೀಸಾ' ಚಿತ್ರವನ್ನು ಮಾಡಿ ಮುಗಿಸಲಿದ್ದಾರೆ.
ಚಿತ್ರದ ಚಿತ್ರೀಕರಣ ಆಗಸ್ಟ್ ತಿಂಗಳಲ್ಲಿ ನಡೆಸಲಾಗುತ್ತಿದ್ದು ಅದರ ಮೊದಲು ಆಡಿಷನ್ ಕೆಲಸ ಆರಂಭ ವಾಗಲಿದೆ.ಚಿತ್ರದಲ್ಲಿ ಹೊಸ ನಾಯಕ ನಾಯಕಿ ಇದ್ದು ಹೊಸಬರಿಗೂ ತರಬೇತಿ ನೀಡುವ ಕೆಲಸ ಕೂಡಾ ಜೊತೆಯಲ್ಲಿ ಸಾಗುತ್ತಿದೆ ಎಂದಿದ್ದಾರೆ.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top