chamak running success

anigif

adweb

raju

ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚಲ್ಲಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್

ಕನ್ನಡದ ಖ್ಯಾತ ನಟಿ ರಚಿತಾ ರಾಮ್ ಕನ್ನಡ ಚಿತ್ರ ’ಭರ್ಜರಿ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವಂತೆ ಟಾಲಿವುಡ್ ಅಥವಾ ಕಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗಳಲ್ಲಿನೆಲೆ ಕಂಡು ಕೊಂಡಿರುವ ನಟಿಯರಂತೆ ರಚಿತಾ ಕೂಡಾಬೇರೆ ಭಾಷೆಯಲ್ಲಿ ನಟಿಸಲು ಹೊರಟಿದ್ದಾರೆ.ಅದಕ್ಕಾಗಿ ಅವರು ಇತ್ತೀಚೆಗೆ ಫೋಟೊ ಶೂಟ್ ನಡೆಸಿದ್ದಾರೆ.
ಬೇರೆ ಭಾಷೆ ಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ರಚಿತಾ ಯಾವುದೇ ಮಾಹಿತಿಗು ಚಿತ್ರ ನಿರ್ಮಾಣ ತಂಡ ಅಧಿಕ್ರತವಾಗಿ ಪ್ರಕಟಿಸುವ ವರೆಗೂ ಕಾಯಬೇಕು ಎಂದಿದ್ದಾರೆ.
ಕಿರುತೆರೆಯ ಮೂಲಕ ಎಂಟ್ರಿ ಪಡೆದ ರಚಿತಾ ರಾಮ್ ದರ್ಶನ್,ಸುದೀಪ್,ಪುನೀತ್,ಗಣೇಶ್ ಸೇರಿದಂತೆ ಹಲವು ಸ್ಟಾರ್ ಜೊತೆ ನಟಿಸಿದ್ದಾರೆ. ಪುಷ್ಪಕ ವಿಮಾನದಲ್ಲಿ ನಟಿಸಿದ್ದ ರಚಿತಾ, ಧ್ರುವ ಸರ್ಜಾ ಅಭಿನಯದ ’ಭರ್ಜರಿ’ ಸಿನಿಮಾದ ನಾಯಕಿಯಾಗಿದ್ದು, ಉಪೇಂದ್ರ ಅಭಿನಯದ ಉಪ್ಪಿ ರುಪ್ಪಿ ಸಿನಿಮದಲ್ಲೂ ನಟಿಸಲಿದ್ದಾರೆ.
 
ಸದ್ಯ ತಮಿಳು,ತೆಲುಗು ಚಿತ್ರರಂಗದಿಂದ ಆಫರ್ ಬಂದಿದ್ದು, ರಚಿತಾ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.  
Rate this item
(0 votes)
Login to post comments

anigif sam

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top