mugulu

ad dkd

adweb

raj vishnu

ಏಟಿಗೆ ಎದುರೇಟು..! ಭುವನ್ ವಿರುದ್ಧ ಪ್ರಥಮ್ ಕೇಸ್ ದಾಖಲು

ಚಿತ್ರೀಕರಣದ ವೇಳೆ ನಟ ಭುವನ್ ಗೆ ಕಚ್ಚಿ ಹಲ್ಲೆ ಮಾಡಿದ ಪ್ರಕರಣಕ್ಕೆ ಬಿಗ್ ಬಾಸ್ ವಿನ್ನರ್ ಪ್ರಥಮ್ ಮೇಲೆ ದೂರು ದಾಖಲಾಗಿದ್ದು,ಬಂಧನದ ಭೀತಿ ಎದುರಿಸುತ್ತಿದ್ದ ಪ್ರಥಮ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದರೊಂದಿಗೆ ನ್ಯಾಯಾಲಯಕ್ಕೆ ಶರಣಾದರು.

ಪ್ರಥಮ್ ಪರ ವಕೀಲರು ವಾದ ಮಂಡಿಸಿ , ಈ ಪ್ರಕರಣದಲ್ಲಿ ಪ್ರಥಮ್ ಅವರ ತಪ್ಪಿಲ್ಲ , ಚಿತ್ರೀಕರಣದ ವೇಳೆ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ, ಭುವನ್ ಹಲ್ಲೆ ಮಾಡಿದುದರಿಂದ ಪ್ರಥಮ್ ಕತ್ತು ಉಳುಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿದ್ದರು.

ಪ್ರಕರಣದಲ್ಲಿ ನಂದೇನೂ ತಪ್ಪಿಲ್ಲ ನಾನು ಒಳ್ಳೆ ಹುಡುಗ, ನಾನು ಭುವನ್ ಮೇಲೆ ಕಚ್ಚಿಲ್ಲ ಹಲ್ಲೆ ಮಾಡಿಲ್ಲ, ದಯಮಾಡಿ ಜಾಮೀನು ನೀಡಿ ಎಂದು ಪ್ರಥಮ್ ನ್ಯಾಯಧೀಶರ ಬಳಿ ಮನವಿ ಮಾಡಿದ್ದರು.ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಾಧೀಶರು ನಿಮ್ಮ ವಿರುದ್ಧ ದಾಖಲಾದ ಪ್ರಕರಣದಲ್ಲಿ ನೀವು ಕಚ್ಚಿ ಹಲ್ಲೆ ಮಾಡಿದ್ದೀರಾ ಎಂದು ದಾಖಲಾಗಿದೆ ಸಾರ್ವಜನಿಕ ಜೀವನದಲ್ಲಿರುವ ನೀವು ಈ ರ್‍ಈತಿಯ ವರ್ತನೆಯನ್ನು ಬಿಟ್ಟು ಮಾದರಿಯಗಬೇಕು ಎಂದು ಬುದ್ಧಿ ಹೇಳಿದರು.


ಈಗ ಮತ್ತೆ ಪ್ರಥಮ್ ರವರು ಭುವನ್ ಮೇಲೆ ಪ್ರತಿದೂರು ನೀಡಿದ್ದಾರೆ. " ಭುವನ್ ನನ್ನ ಕುತ್ತಿಗೆಗೆ ಹೊಡೆದು ಅವ್ಯಾಚ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು" ಜೀವ ಬೆದರಿಕೆ ಹಾಕಿದ್ದಾನೆ ಹೀಗಾಗಿ ಭುವನ್ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಥಮ್ ದೂರಿನಲ್ಲಿ ತಿಳಿಸಿದ್ದಾರೆ.


ಸದ್ಯ ಪ್ರಥಮ್ , ಭುವನ್ ಇಬ್ಬರ ದೂರು ಪ್ರತಿದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಎಲ್ಲ ಕಡೆಯಿಂದ ವಿಚಾರಣೆ ನಡೆಸುತಿದ್ದಾರೆ. ಈ ಮಧ್ಯೆ ಜುಲೈ 31 ರಂದು ಪ್ರಥಮ್ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top