mugulu

zeee n

adweb

raj vishnu

ಕಾಶ್ಮೀರದಲ್ಲಿ ಅಪಾಯದಿಂದ ಪಾರಾದ ಶಿವರಾಜ್ ಕುಮಾರ್

ಕಾಶ್ಮೀರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರ ಚಿತ್ರೀಕರಣದಲ್ಲಿ ದೊಡ್ಡ ಅಪಘಾತವೊಂದು ಸಂಭವಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು , ಈ ದುರ್ಘಟನೆಯಿಂದ ಶಿವಣ್ಣ ಮತ್ತು ಚಿತ್ರತಂಡ ಪಾರಾಗಿದ್ದಾರೆ. 

ಚಿತ್ರದಲ್ಲಿ ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಆರ್ಮಿ ಆಫೀಸರ್ ಆಗಿ ನಟಿಸುತ್ತಿದ್ದು ಭಾರತ-ಪಾಕಿಸ್ತಾನ ಗಡಿಗೆ 7 ಕೀ.ಮಿ ದೂರದಲ್ಲಿ ಶಿವರಾಜ್ ಕುಮಾರ್ ಅವರು ಸ್ನೋಮೊಬಿಲ್ ರೈಡಿಂಗ್ ಮಾಡುತ್ತಾ ಚೇಸ್ ಮಾಡಿಕೊಂಡು ಉಗ್ರರ ಮೇಲೆ ಗುಂಡು ಹಾರಿಸುವ ಸಾಹಸ ದೃಶ್ಯ ಚಿತ್ರೀಕರಣ ನಡೆಯುತ್ತಿತ್ತು. ಕಾಶ್ಮೀರದ ಗಲ್ ಮಾರ್ಗ್ ನಲ್ಲಿ ಈ ದೃಶ್ಯದ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಶಿವರಾಜ್ ಕುಮಾರ್ ಅವರು ಡ್ರೈವ್ ಮಾಡುತ್ತಿದ್ದ ಹಿಮಬೈಕ್ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ. 

ವೇಗವಾಗಿ ಹೋಗುತ್ತಿದ್ದ ಬೈಕ್ ನ ಪೆವಿಲಿಯನ್ ಸೀಟ್ ನಲ್ಲಿ ಕೂತಿದ್ದ ಶಿವರಾಜ್ ಕುಮಾರ್ ಗನ್ ನಿಂದ ಎದುರಾಳಿ ಮೇಲೆ ಗುಂಡು ಹಾರಿಸುವ ದೃಶ್ಯವಿದು. ಈ ಹಿಮಬೈಕ್ 900 ಕೆಜಿ ತೂಕ ಹೊಂದಿರುತ್ತೆ. ಆ ಬೈಕ್ ಗಳನ್ನ ಆಕ್ಷನ್ ದೃಶ್ಯಕ್ಕೆ ಬಳಸಲಾಗಿತ್ತು. ಈ ವೇಳೆ ೨೦ ಜನ ಪರಿಣಿತ ಸ್ನೋಮೊಬಿಲ್ ಡ್ರೈವರ್ ಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
" ಅದು ಎತ್ತರದ ಪ್ರದೇಶ, ಬೈಕ್ ಮೇಲೆ ಹತ್ತಬೇಕಿತ್ತು ಅದರೆ 3 ಬೈಕ್ ಗಳು ಒಂದಾದ ಮೇಲೆ ಒಂದರಂತೆ ಸ್ಕಿಡ್ ಆಗಿ ಬಿದ್ದೆವು, ಅದೃಷ್ಟದಿಂದ ನಮಗೆ ಪೆಟ್ಟಾಗಲಿಲ್ಲ ಎಂದು ವಿಜಯ ರಾಘವೇಂದ್ರ ಹೇಳಿದರು. ಶಿವರಾಜ್ ಕುಮಾರ್ ಇಳಿಜಾರಿನಲ್ಲಿ ಬಿದ್ದಿದ್ದರೆ ಅವರ ತಲೆಯ ಕಡೆ ಏರಿಯ ಬೈಕ್ ಬಿದ್ದಿತ್ತು. ದೊಡ್ಡ ದುರಂತವೊಂದು ತಪ್ಪಿದ್ದು ನಮ್ಮ ಅದೃಷ್ಟ'' ಎಂದು ನಿರ್ದೇಶಕ ನರಸಿಂಹ ತಿಳಿಸಿದ್ದಾರೆ.

Rate this item
(1 Vote)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top