chamak running success

anigif

adweb

raju

ಕುರುಕ್ಷೇತ್ರಕ್ಕೆ ಬಲ ’ಭೀಮ’ ಸಿಕ್ಕಾಯ್ತು.!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರ ಇನ್ನೇನು ಸೆಟ್ಟೇರಲಿದ್ದು ದರ್ಶನ್ ಸೇರಿದಂತೆ ಹಲವು ಪಾತ್ರಗಳು  ಆಯ್ಕೆಯಾಗಿವೆ.
ದುರ್ಯೋಧನ, ಶ್ರೀಕೃಷ್ಣ, ಭೀಷ್ಮಾ, ದ್ರೋಣಾಚಾರ್ಯ, ಧೃತರಾಷ್ಟ್ರ, ಶಕುನಿ, ಕುಂತಿ, ಭಾನುಮತಿ,  ಮುಂತಾದ ಪಾತ್ರಗಳು ಅಂತಿಮವಾಗಿದೆ. ಪಾಂಡವರ ಪಾತ್ರಗಳು ಆಯ್ಕೆಯ ಹಂತದಲ್ಲಿದ್ದು, ಮೊದಲ ಪಾತ್ರ ಭೀಮ ಆಯ್ಕೆಯಗಿದ್ದಾರೆ. ಯಾರೂ ಊಹಿಸದಂತೆ ಬಾಲಿವುಡ್ ನಟ ಕಿರುತೆರೆ ನಟ ಕಮ್ ಬಾಡಿ ಬಿಲ್ಡರ್ ಡ್ಯಾನಿಶ್ ಅಖ್ತರ್ ಸೈಫಿ ಭೀಮನ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಆದ್ರೆ, ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
ಹಿಂದಿಯಲ್ಲಿ ಪ್ರಸಾರವಾಗುವ ಸಿಯಾ ಕೇ ರಾಮ್ ಧಾರವಾಹಿಯಲ್ಲಿ ಡ್ಯಾನಿಶ್ ಆಂಜನೇಯನ ಪಾತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಡ್ಯಾನಿಶ್ ಅಖ್ತರ್ ಸೈಫಿ ಮುಂಬೈನಲ್ಲಿ ನೆಲಸಿರುವ ಬಿಹಾರ್ ನಿವಾಸಿ. ವೃತ್ತಿಯಲ್ಲಿ ಕಲಾವಿದನಾಗಿರುವ ಡ್ಯಾನೀಶ್ ಹಾಗೂ ಕುಸ್ತಿ ಪಟು ಕೂಡ ಹೌದು. 6.6 ಅಡಿ ಎತ್ತರ ಇರುವ ಡ್ಯಾನಿಶ್ 125 ಕೆ.ಜಿ ತೂಕವಿದ್ದಾರೆ. 
ಅತೀ ಶೀಘ್ರದಲ್ಲಿ ’ಕುರುಕ್ಷೇತ್ರ’ ಚಿತ್ರ ಸೆಟ್ಟೇರಲಿದ್ದು ಅಧಿಕ್ರತವಾಗಿ ಪಾತ್ರಗಳ ನಿರ್ಣಯಕ್ಕೆ ಉತ್ತರ ಸಿಗಲಿದೆ 
Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top