DKD Gif

Shatayu

adweb

Raambo 2 gIF

ಕೊನೆಗೂ ದರ್ಶನ್ ಅಭಿಮಾನಿಗಳ ಕ್ಷಮೆ ಕೇಳಿದ ಸಂಜನಾ.

ಕಲರ್ಸ್ ಸೂಪರ್ ಚಾನಲ್ ನಲ್ಲಿ ಪ್ರಸಾರ ಅಗುತ್ತಿರುವ 'ಸೂಪರ್ ಟಾಕ್ ಟೈಮ್ ' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್ ' ಖ್ಯಾತಿಯ ಸಂಜನಾ, ಪ್ರಥಮ್' ಕಿರಿಕ್ ಕೀರ್ತಿ ಭಾಗವಹಿಸಿದ್ದರು. ಇದರಲ್ಲಿ ದರ್ಶನ್ ಬಗ್ಗೆ ನೀಡಿದ ಒಂದು ಹೇಳಿಕೆಗೆ ಸಂಜನಾ ದರ್ಶನ್ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

ನಿರೂಪಕ ಅಕುಲ್ ಬಾಲಾಜಿ 'ಬಿಲ್ಡಪ್' ಎಂದಾಗ ಯಾವ ನಟ ನೆನಪಗುತ್ತಾರೆ ಎಂದು ಕೇಳಿದಾಗ ಸಂಜನಾ ದರ್ಶನ್ ಎಂದು ಹೇಳಿದ್ದರು , ಇದರಿಂದ ದರ್ಶನ್ ಫ್ಯಾನ್ಸ್ ಸಿಟ್ಟಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಸಂಜನಾ ವಿರುದ್ಧ ಟ್ರೋಲ್ಸ್ ನಿಂದ ಛೀಮಾರಿ ಹಾಕುತಿದ್ದಾರೆ.

ಸಂಜನಾ ಕ್ಷಮೆ ಕೇಳುವ ವರೆಗೆ ' ಟ್ರೋಲ್ಸ್' ಕೂಡಾ ನಿಲ್ಲುವುದಿಲ್ಲ ಎಂದು ದರ್ಶನ್ ಅಭಿಮಾನಿಗಳು ಸಂಜನ ವಿರುದ್ಧ ಹರಿಹಾಯ್ದಿದ್ದರು.
ಮೊದ ಮೊದಲು ಸಂಜನಾ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಅವರವರ ಅಭಿಪ್ರಾಯ ಅವರವರಿಗೆ ಎಂದು ಆರಂಭದಲ್ಲಿ ಖಡಕ್ ಆಗಿ ಹೇಳಿದ್ದ ಸಂಜನಾ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಗರಂ ಆಗಿರುವುದನ್ನು ನೋಡಿ ಕೊನೆಗೂ ಕ್ಷಮೆ ಕೇಳಿದ್ದಾರೆ.

ದರ್ಶನ್ ಸರ್ ಅಥವಾ ಅವರ ಅಭಿಮಾನಿಗಳಿಗೆ ನೋವು ಮಾಡುವ ಯಾವುದೇ ಉದ್ದೇಶ ನನಗಿಲ್ಲ. ಅವರಿಗೆ ಬೇಸರವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಾನು ದರ್ಶನ್ ಅವರ ಸಿನಿಮಾದಲ್ಲಿ ತುಂಬಾ ಬಿಲ್ಡಪ್ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದು ಇಷ್ಟು ದೊಡ್ಡ ವಿವಾದವಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top