mugulu

ad dkd

adweb

raj vishnu

ಉದಯೋನ್ಮುಖ ನಟ ಧ್ರುವ ಶರ್ಮಾ ಇನ್ನಿಲ್ಲ

ಸ್ಯಾಂಡಲ್‌ವುಡ್‌ ನ ಉದಯೋನ್ಮುಖ ನಟ , ಸಿಸಿ‌ಎಲ್‌ ಆಟಗಾರ ಧ್ರುವ ಶರ್ಮಾ ಇಹಲೋಕ ತ್ಯಜಿಸಿದ್ದಾರೆ. ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಭಿನಯ ಹಾಗೂ ಕ್ರಿಕೆಟ್‌ನಿಂದ ಎಲ್ಲರ ಗಮನ ಸೆಳೆದಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಧ್ರುವ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. 'ಸ್ನೇಹಾಂಜಲಿ', 'ಬೆಂಗಳೂರು 560023' 'ನೀನಂದ್ರೆ ಇಷ್ಟ ಕಣೋ', 'ತಿಪ್ಪಜ್ಜಿ ಸರ್ಕಲ್‌', 'ಹಿಟ್‌ ಲಿಸ್ಟ್‌' ಚಿತ್ರಗಳಲ್ಲಿ ಧ್ರುವ ಅಭಿನಯಿಸಿದ್ದರು.

ಇನ್ನು ಸಿಸಿ‌ಎಲ್‌ ಪಂದ್ಯಾವಳಿಯಲ್ಲಿ ಕಿಚ್ಚ ಸುದೀಪ್‌ ನಾಯಕತ್ವದ 'ಕರ್ನಾಟಕ ಬುಲ್ಡೋಜರ್ಸ್‌' ತಂಡದಲ್ಲಿ ಅಕ್ರಮಣಕಾರಿ ಬ್ಯಾಟಿಂಗ್ ಗೆ ಹೆಸರಾಗಿದ್ದರು. ಇಂದು ಸಂಜೆ 4 ಗಂಟೆಗೆ ಕುಂಬ್ರಹಳ್ಳಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಧ್ರುವ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೂ ಬೇಡೋಣ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top