DKD Gif

Shatayu

adweb

Raambo 2 gIF

ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದರೇ ಧ್ರುವ ಶರ್ಮಾ..?

ಇಂದು ಬೆಳಗಿನ ಜಾವ ಮ್ರತಪಟ್ಟ ನಟ ಹಾಗೂ ಸಿಸಿಎಲ್ ಆಟಗಾರ ಧ್ರುವ ಶರ್ಮಾ ಅನಾರೋಗ್ಯದಿಂದ ಮ್ರತಪಟ್ಟಿಲ್ಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರ ತಂದೆ ಅವರಿಗೆ ಕಂಪೆನಿ ಮಾಡಿಕೊಟ್ಟಿದ್ದು, ಅದು ನಷ್ಟಹೊಂದಿದ್ದು ಸಾಲದ ಭಾದೆಯಿಂದ ಧ್ರುವರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ರಾಜಾನುಕುಂಟೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.

ಕೌಟುಂಬಿಕ ಕಲಹ , ನಷ್ಟ ದಿಂದ ಸುಧಾರಿಸಿಕೊಳ್ಳಲಾಗದೆ ಅವರು ಮಾನಸಿಕವಾಗಿ ನೊಂದಿದ್ದ ಧ್ರುವ 29 ರಂದು ವಿಷ ಸೇವಿಸಿ ಮನೆಯಲ್ಲಿ ಪ್ರಜ್ನೆ ಇಲ್ಲದೆ ಬಿದ್ದಿದ್ದರು. ಮೂರ್ಚೆ ರೋಗವೆಂದು ಭಾವಿಸಿ ಅವರನ್ನು ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದರೆ ಮಧ್ಯರಾತ್ರಿ 1.30 ರ ವೇಳೆಗೆ ಧ್ರುವ ಮ್ರತಪಟ್ಟಿದ್ದರು ಎಂದು ತಿಳಿದುಬಂದಿದೆ. ಅವರ ಮ್ರತದೇಹ ನೀಲಿ ಬಣ್ಣಕ್ಕೆ ತಿರುಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಳಗ್ಗೆ 3 ಗಂಟೆಗೆ ನಟ ಸುದೀಪ್,ಪ್ರದೀಪ್, ನಂದ ಕಿಶೋರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಧ್ರುವ ಅವರಿಗೆ 35 ವರ್ಷ ವಯಸ್ಸಾಗಿದ್ದು ಪತ್ನಿ, ೫ ವರ್ಷದ ಮಗಳು ಹಾಗೂ 2 ವರ್ಷದ ಮಗನನ್ನು ಅಗಲಿದ್ದಾರೆ.
ಉದ್ಯಮಿ , ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ೨೦೦೫ ರಲ್ಲಿ ವಿಶ್ವ ಕಿವುಡರ ಕ್ರಿಕೆಟ್ ನಲ್ಲಿ ಭಾರತ ತಂಡದಲ್ಲಿ ಆಡಿದ್ದರು ಇವರು ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜ಼ರ್ಸ್ ನಲ್ಲಿ ಉಪ ನಾಯಕರಾಗಿದ್ದರು . ವಾಕ್ ಹಾಗೂ ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಎಲ್ಲವನ್ನೂ ಮೆಟ್ಟಿ ನಿಂತಿದ್ದರು. ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್, ಸಿನಿಮಾದಲ್ಲಿ ನಟಿಸಿದ್ದರು.

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top