johny running

Running succ

adweb

anigif seizer

ದ್ರೌಪದಿ ವಸ್ತ್ರಾಪಹರಣಕ್ಕೆ ಸಜ್ಜಾದ ದುಶ್ಯಾಸನ

ದರ್ಶನ್ ಅವರ ೫೦ ನೇ ಚಿತ್ರ ಕುರುಕ್ಷೇತ್ರ ದಲ್ಲಿ ಮುಖ್ಯ ನಟ ನಟಿಯರ ಆಯ್ಕೆಗಳು ಇನ್ನೂ ಮುಗಿದಿಲ್ಲ . ಅರ್ಜುನ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿದೆ.ದುಶ್ಯಾಸನ ಪಾತ್ರಕ್ಕಾಗಿ ನಟನ ಆಯ್ಕೆಯಾಗಿದೆ.


  ಕುರುಕ್ಷೇತ್ರ ನಡೆಯಲು  ಪ್ರಮುಖ ಸನ್ನಿವೇಶ ಗಳಲ್ಲಿ ದ್ರೌಪದಿ ಯ ವಸ್ತ್ರಾಪಹರಣ ಮುಖ್ಯ ಕಾರಣ .  ಪಗಡೆ ಆಟದಲ್ಲಿ ದ್ರೌಪದಿ ಯನ್ನು ಅಡವಿಟ್ಟು ಆಡುವ ಪಾಂಡವರು ದುರ್ಯೋಧನ ನ ವಿರುದ್ಧ ಸೋತಾಗ , ಅಣ್ಣ ದುರ್ಯೋಧನನ ಸೂಚನೆಯಂತೆ ದುಶ್ಯಾಸನನು ದ್ರೌಪದಿ ಯನ್ನು ಸಭೆಗೆ ಎಳೆತಂದು  ವಸ್ತ್ರಾಪಹರಣ ಮಾಡಲು ಮುಂದಾಗುತ್ತಾನೆ. ಇದು ಕುರುಕ್ಷೇತ್ರಕ್ಕೆ ಪ್ರಮುಖ ಕಾರಣ.
     ದುಶ್ಯಾಸನನ ಪಾತ್ರದ ಆಯ್ಕೆಯು ಅಂತಿಮ ವಾಗಿದ್ದು , ಕನ್ನಡದ ಪ್ರತಿಭಾನ್ವಿತ ನಟ ರವಿಚೇತನ್ ಅವರು ದುಶ್ಯಾಸನನಾಗಿ ಅಭಿನಯಿಸುತ್ತಿದ್ದಾರೆ. ಕನ್ನಡದ ಹಲವಾರು ಸ್ಟಾರ್ ನಟರ ಜೊತೆ ರವಿಚೇತನ್ ಪೋಷಕ ನಟನ ಪಾತ್ರದಲ್ಲಿ ನಟಿಸಿದ್ದಾರೆ.
     ದರ್ಶನ್ ’ದುರ್ಯೋಧನ’ ನಾಗಿ, ಅಂಬರೀಷ್ ’ಭೀಷ್ಮ’ನಾಗಿ, ರವಿಚಂದ್ರನ್ ’ಕೃಷ್ಣ’ನಾಗಿ, ಅರ್ಜುನ್ ಸರ್ಜಾ ’ಕರ್ಣ’ನಾಗಿ, ಬಹುಭಾಷಾ ನಟಿ ಸ್ನೇಹಾ ’ದ್ರೌಪದಿ’ಯಾಗಿ, ಡ್ಯಾನಿಶ್ ಅಖ್ತರ್ ಸೈಫಿ ’ಭೀಮ’ನಾಗಿ, ರವಿಶಂಕರ್ ’ಶಕುನಿ’ಯಾಗಿ, ಶ್ರೀನಾಥ್ ’ಧೃತರಾಷ್ಟ್ರ’ನಾಗಿ, ಶ್ರೀನಿವಾಸ ಮೂರ್ತಿ ’ದ್ರೋಣಚಾರ್ಯ’ನಾಗಿ, ಶಶಿಕುಮಾರ್ ’ಧರ್ಮರಾಯ’ನಾಗಿ, ನಿಖಿಲ್ ಕುಮಾರ್ ’ಅಭಿಮನ್ಯು’ವಾಗಿ, ಹೀಗೆ ಹಲವಾರು ನಟರು ವಿವಿಧ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.          

Rate this item
(0 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top