Raambo 2 gIF

rlr gIF rELEASE

adweb

anigif seizer

ದಾಸನ ಬಗ್ಗೆ ಕಿಚ್ಚನ ಮಾತುಗಳು,ಇದು ಸುದೀಪ್ ಮನಸಿನ ಮಾತು

ಇತ್ತೀಚೆಗೆ ಸುವರ್ಣ ನ್ಯೂಸ್ ನಲ್ಲಿ ಪ್ರಸಾರವಾದ ’ಓಪನ್ ಹೌಸ್ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್ ಹಾಗೂ ಅವರ ಹೊಸ ಸಿನಿಮಾ ’ಕುರುಕ್ಷೇತ್ರ’ದ ಬಗ್ಗೆ  ಮನಬಿಚ್ಚಿ ಮಾತಾಡಿದ್ದಾರೆ


ದರ್ಶನ್ ರ ’ಕುರುಕ್ಷೇತ್ರ’ ಸಿನಿಮಾದ ಬಗ್ಗೆ ಟ್ವಿಟ್ಟರ್ ನಲ್ಲಿ ಸುದೀಪ್ ಅವರು ಶುಭ ಕೋರಿದ್ದರು.ಇದರ ನಂತರ ಸುದೀಪ್ ಮತ್ತು ದರ್ಶನ್ ನಡುವೆ ಮತ್ತೆ ಸ್ನೇಹ ಚಿಗುರಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.
’ಓಪನ್ ಹೌಸ್ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಸುದೀಪ್ ಇದರ ಬಗ್ಗೆ ಹೃದಯಾಳದಿಂದ ಮಾತನಾಡಿದ್ದಾರೆ.
ಇಲ್ಲಿಯವರೆಗೆ ದರ್ಶನ್ ನನ್ನ ಬಗ್ಗೆ ಕೆಟ್ಟದ್ದಾಗಿ ಮಾತಾಡಿಲ್ಲ,ಹಾಗಿರುವಾಗ ಒಳ್ಳೆ ಸಿನಿಮಾ ಬಂದಾಗ ವಿಶ್ ಮಾಡಿದ್ದೇನೆ ಅಷ್ಟೇ ಎಂದರು.ದರ್ಶನ್ ಅವರ ಪಾತ್ರದ ಫೋಟೊ ನೋಡಿ ಆ ಪಾತ್ರಕ್ಕೆ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಸೂಕ್ತವಾಗಲ್ಲ ಎನಿಸಿತು.  
ಐತಿಹಾಸಿಕ ಸಿನಿಮಾಗಳ ವಿಚಾರದಲ್ಲಿ ದರ್ಶನ್ ಲಕ್ಕಿ. ಎರಡು ಬಾರಿ ಅವಕಾಶ ಪಡೆದುಕೊಂಡಿದ್ದಾರೆ. ಮೊದಲನಯೇದು ’ಸಂಗೊಳ್ಳಿ ರಾಯಣ್ಣ’, ಈಗ ಕುರುಕ್ಷೇತ್ರ.
ರವಿ ಸರ್, ಅಂಬರೀಷಣ್ಣ, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಎಲ್ಲರೂ ’ಕುರುಕ್ಷೇತ್ರ’ ಚಿತ್ರದಲ್ಲಿ ಜೊತೆ ಇರುವುದು ನನಗೆ ಖುಷಿ ಎನಿಸಿದೆ,ಮುನಿರತ್ನ ಅವರ ಪ್ರಯತ್ನ ಮೆಚ್ಚುವಂತದ್ದಾಗಿದೆ ಎಂದು ಸುದೀಪ್ ಈ ಸಂದರ್ಭದಲ್ಲಿ ಹೇಳಿದರು.  

Rate this item
(1 Vote)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top