Dhwaja Release anigif

Running succ

adweb

anigif seizer

ಕೆಂಪೇಗೌಡರಿಗೆ ಬೌನ್ಸರ್ ಹಾಕಲು ಬರುತ್ತಿದ್ದಾನೆ ಶ್ರೀಶಾಂತ್

ಕ್ರಿಕೆಟ್ ನಲ್ಲಿ ಇಲ್ಲದಿದ್ದರೂ, ಆಗಾಗ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ಸುದ್ದಿಯಲ್ಲಿದ್ದರು ಶ್ರೀಶಾಂತ್. ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು.

 

ಇತ್ತೀಚೆಗಷ್ಟೇ ಆ ನಿಷೇಧವನ್ನು ಕೇರಳ ಹೈಕೋರ್ಟ್ ತೆರವುಗೊಳಿಸಿದೆ ಇದರಿಂದ ರಾಜಸ್ಥಾನ್ ರಾಯಲ್ಸ್ ನ ಮಾಜಿ ಆಟಗಾರ ಶ್ರೀಶಾಂತ್ ನಿರಾಳರಾಗಿದ್ದಾರೆ.
ಈಗಾಗಲೇ, ಮಾಲಿವುಡ್ ನಲ್ಲಿ ಬೆಳ್ಳಿಪರದೆ ಮೇಲೆ ಮಿನುಗಿರುವ ಶ್ರೀಶಾಂತ್ ಇದೀಗ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ.

ಶಂಕರ್ ಗೌಡ ನಿರ್ಮಿಸುತ್ತಿರುವ ’ಕೆಂಪೇಗೌಡ 2’ ಸಿನಿಮಾದಲ್ಲಿ ಖಳನಟ ಪಾತ್ರವೊಂದಕ್ಕಾಗಿ ಶ್ರೀಶಾಂತ್ ಗಾಂಧಿನಗರಕ್ಕೆ ಬರಲಿದ್ದಾರೆ. ಇದು ಶಂಕರ ಗೌಡ ನಿರ್ದೇಶನದ ಮೊದಲ ಚಿತ್ರವಾಗಿದೆ.
ಮುಖ್ಯಭೂಮಿಕೆಯಲ್ಲಿ ಕೋಮಲ್ ಅಭಿನಯಿಸುತ್ತಿರುವ ’ಕೆಂಪೇಗೌಡ- 2’ ಚಿತ್ರದಲ್ಲಿ ಶ್ರೀಶಾಂತ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ,ಆದರೆ ಪಾತ್ರದ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

Rate this item
(0 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top