johny running

Running succ

adweb

anigif seizer

’ಥಗ್ಸ್ ಆಫ್ ಮಾಲ್ಗುಡಿ’ ಗೆ ಬ್ರೇಕ್. ಸುದೀಪ್ ಇಲ್ಲದೆ ಚಿತ್ರ ಮಾಡಲ್ಲ : ರಕ್ಷಿತ್ ಶೆಟ್ಟಿ

ಎಲ್ಲ ಅಂದುಕೊಂಡಂತೆ ಆಗಿದ್ದರೆ ರಕ್ಷಿತ್ ಶೆಟ್ಟಿ ನಿರ್ದೇಶನದ ಸುದೀಪ್ ಅಭಿನಯದ ’ಥಗ್ಸ್ ಆಫ್ ಮಾಲ್ಗುಡಿ’ ಇದೇ ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು . ಆದರೆ ಹಿಂದಿನ ಕಮಿಟ್ ಮೆಂಟ್ ಗಳಿಂದಾಗಿ ಥಗ್ಸ್ ಆಫ್ ಮಾಲ್ಗುಡಿ ಶೂಟಿಂಗ್ ತಡವಾಗುತ್ತಿದೆ.


ರಕ್ಷಿತ್ ಶೆಟ್ಟಿ ನಿರ್ದೇಶನದ ಸುದೀಪ್ ಅಭಿನಯದ ಚಿತ್ರಕ್ಕಗಿ ಇಬ್ಬರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಉಳಿದವರು ಕಂಡಂತೆ ಸಿನಿಮಾ ನಂತರ, ವಾಸ್ತು ಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟ್ ಮತ್ತು ಅವನೇ ಶ್ರೀಮಾನ್ ನಾರಾಯಣ ಈ ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಸಹಿ ಮಾಡಿದ್ದರಿಂದ ’ಥಗ್ಸ್ ಆಫ್ ಮಾಲ್ಗುಡಿ’ ಪ್ರಾಜೆಕ್ಟ್ ಆರಂಭ ಮಾಡುವುದು ತಡವಾಗಿದೆ.   
’ಥಗ್ಸ್ ಆಫ್ ಮಾಲ್ಗುಡಿ’ 19 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಜೀವನದ ಬಗೆಗಿನ ಈ ಕಥೆಯಾಗಿದ್ದು, ಈ ಪ್ರಾಜೆಕ್ಟ್ ಸುದೀಪ್ ಗಾಗಿ ಮಾಡಿದ್ದು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಒಂದು ವೇಳೆ ಅವರು ಈ ಪಾತ್ರ ಮಾಡದಿದ್ದರೆ ನಾನು ಬೇರೆ ಪ್ರಾಜೆಕ್ಟ್ ಬಗ್ಗೆ ಯೋಚಿಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.   
’ಬಾಹುಬಲಿ’ ಸಿನಿಮಾ ಕಂಪ್ಲೀಟ್ ಆಗಲು 5 ವರ್ಷ ತೆಗೆದುಕೊಂಡಿತ್ತು. ’ಮಾಲ್ಗುಡಿ’ ಪ್ರಾರಂಭಿಸಲು ಬೇಕಾದರೆ ನಾವು 5 ವರ್ಷ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ನಾನು ನಿಮಗಾಗಿ ಕಾಯುತ್ತೇನೆ” ಎಂದು ಸುದೀಪ್ ಕೂಡ ಹೇಳಿದ್ದಾರೆ.

Rate this item
(0 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top