Raambo 2 gIF

rlr gIF rELEASE

adweb

anigif seizer

ತಾರಕ್ ಚಿತ್ರದ ಹೀರೋ ದರ್ಶನ್ ಅಲ್ಲ.!! ಮತ್ಯಾರು..?

’ಚಕ್ರವರ್ತಿ’ ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ತಾರಕ್’ಚಿತ್ರದ ಹಾಡುಗಳ ಬಿಡುಗಡೆ ನಿನ್ನೆ ಆಗಸ್ಟ್ 18 ರಂದು ಆಗಿ ’ತಾರಕ್’ ಅಬ್ಬರ ಶುರುವಾಗಿದೆ.
ಸಧ್ಯ ಆಡಿಯೋ ರಿಲೀಸ್ ಆಗಿರುವ ಚಿತ್ರ ಸೆಪ್ಟೆಂಬರ್ ನಲ್ಲಿ ಥಿಯೇಟರ್ ನಲ್ಲಿ ಪ್ರದರ್ಶನ ಗೊಳ್ಳುವ ಸಾಧ್ಯತೆ ಇದೆ. ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ದರ್ಶನ್ ಗೆ ಜೋಡಿಯಾಗಿದ್ದು, ದೇವರಾಜ್, ಪ್ರಮುಖ ಪಾತ್ರದಲ್ಲಿದ್ದಾರೆ.


ಯಾವುದೇ ಸಿನಿಮಾ ಆದ್ರೂ, ಅಲ್ಲಿ ದರ್ಶನ್ ತುಣುಕುಗಳು ಬಂದು ಹೋಗುತ್ತೆ. ಆದ್ರೆ, ಈ ಚಿತ್ರದಲ್ಲಿ ನೀವು ದರ್ಶನ್ ನ ನೋಡಲ್ಲ. ಇದರಲ್ಲಿ ನನ್ನದೊಂದು ಸಣ್ಣ ಪಾತ್ರ ಅಷ್ಟೆ, ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರ ತುಂಬಾ ಡಿಫ್ರೆಂಟ್ ಆಗಿದೆ ಎಂದು ದಶನ್ ಅವರೇ ಹೇಳಿಕೊಂಡಿದ್ದಾರೆ.  
’ತಾರಕ್’ಇತ್ರದ ಹೀರೋಗಳ ಬಗ್ಗೆ ದರ್ಶನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ . ’ತಾರಕ್’ ಚಿತ್ರ ಹೇಗೆ ಬರಬೇಕು ಎಂಬುದು ಪಕ್ಕಾ ಪ್ಲಾನ್ ಮಾಡಿ ಮಾಡಲಾಗಿದೆ.
ತುಂಬಾ ಚೆನ್ನಾಗಿ ಪ್ರಕಾಶ್ ನಿರೂಪಣೆ ಮಾಡಿದ್ದಾರೆ. ನಿರ್ದೇಶಕರು ಒಳ್ಳೆ ಸಿನಿಮಾ ಮಾಡಿದ್ದಾರೆ. ತಾರಕ್ ಸಿನಿಮಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ, ಇಲ್ಲಿ ಒಬ್ಬ್ ತಾತ ಮತ್ತು ಮೊಮ್ಮಗನ ಪ್ರೀತಿ ಕೋಪ ಬಾಂಧವ್ಯ ಎಲ್ಲ ಇದೆ , ತಾರಕ್’ ಚಿತ್ರದ ರಿಯಲ್ ಹೀರೋ ದೇವರಾಜ್ ಅವರು. ತುಂಬ ಅದ್ಭುತವಾಗಿ ಮಾಡಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಅನ್ನಿಸುತ್ತೆ ಈ ರೀತಿಯ ಒಬ್ಬ ತಾತ ಇರಬೇಕು ಅಂತ.  
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದು ಇಬ್ಬರದ್ದು ಮುಖ್ಯ ಮತ್ತು ವಿಶೇಷ ಪಾತ್ರಗಳು,ಒಬ್ಬರು ಜೀವನ ಕಲಿಸುತ್ತಾರೆ , ಇನ್ನೊಬ್ಬರು ಪ್ರೀತಿ ಕಲಿಸುತ್ತಾರೆ,
ಅರ್ಜುನ್ ಜನ್ಯ ಅವರು ಸಂದರ್ಭಕ್ಕೆ ತಕ್ಕ ಹಾಗೆ ಒಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ . ಶೂಟಿಂಗ್ ಎಲ್ಲ ಅಂದುಕೊಂಡಿದ್ದ ಸಮಯದಲ್ಲಿ ಮಾಡಿ ಮುಗಿಸಿದ್ದು,  ಯೂರೋಪ್ ನಲ್ಲಿ 25 ದಿನ ಚಿತ್ರೀಕರಣ ಮಾಡಿದ್ದು ತುಂಬ ಚೆನ್ನಾಗಿತ್ತು ಎಂದು ದರ್ಶನ್ ಅವರು ಸಂತಸ ಹಂಚಿಕೊಂಡಿದ್ದಾರೆ.

Rate this item
(0 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top