DKD Gif

Shatayu

adweb

Raambo 2 gIF

’ರಾಜರಥ’ನಡೆಸಲು ಬಂದಿದ್ದಾರೆ ತಮಿಳಿನ ಖ್ಯಾತ ನಟ ’ಆರ್ಯ’

ತಮಿಳು ಚಿತ್ರರಂಗದ ಸ್ಟಾರ್ ನಟ ಆರ್ಯ ಸದ್ಯ ಸ್ಯಾಂಡಲ್ ವುಡ್ ನಲ್ಲೂ ತಮ್ಮ ಛಾಪು ಮೂಡಿಸಲು ಬರುತ್ತಿದ್ದಾರೆ. ನಾನ್ ಕಡವಳ್’, ’ರಾಜರಾಣಿ’ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟ ಆರ್ಯ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

ರಂಗಿತರಂಗ ಖ್ಯಾತಿ ನಿರೂಪ್ ಭಂಡಾರಿ ನಾಯಕರಾಗಿರುವ ’ರಾಜರಥ’ ಚಿತ್ರದಲ್ಲಿ ನಟ ಆರ್ಯ ನಟಿಸುತ್ತಿದ್ದಾರೆ.  
ಮೊದಲೇ ರಂಗಿತರಂಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಆರ್ಯ, ’ರಾಜರಥ’ ಚಿತ್ರದಲ್ಲಿ ಅಭಿನಯಿಸುವಂತೆ ನಿರ್ದೇಶಕರು ಕೇಳಿದಾಗ  5 ನಿಮಿಷದಲ್ಲಿ ಕಾಲ್ ಶೀಟ್ ಕೊಟ್ಟಿದ್ದಾರೆ.
ರಾಜರಥ ಚಿತ್ರದಲ್ಲಿ ಅನೂಪ್ ಭಂಡಾರಿ ನಾಯಕರಾಗಿದ್ದು,ಆರ್ಯ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ನಟ ಆರ್ಯ ಭಾಗವಹಿಸಿದ್ದಾರೆ.  
’ರಂಗಿತರಂಗ’ ಚಿತ್ರದ ಭಂಡಾರಿ ಬ್ರದರ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು,ನಿರೂಪ್ ಭಂಡಾರಿಗೆ ನಟಿ ಆವಂತಿಕಾ ಶೆಟ್ಟಿ ನಾಯಕಿಯಾಗಿದ್ದಾರೆ.
’ರಾಜರಥ’ದಲ್ಲಿನ ಪಾತ್ರವನ್ನು ಆರ್ಯ ಅವರಿಂದಲೇ ಮಾಡಿಸಬೇಕು ಎಂದು ಅವರನ್ನು ಈ ಚಿತ್ರಕ್ಕಾಗಿ ಕರೆತಂದಿದ್ದು ಎನ್ನಲಾಗಿದೆ. ಆದರೆ ಅವರ ಪಾತ್ರವೇನು ಎಂದು ಈ ವರೆಗೆ ಬಹಿರಂಗವಾಗಿಲ್ಲ

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top