mugulu

zeee n

adweb

raj vishnu

ಮುಸ್ತಾಫಾ ರಾಜ್ ಜೊತೆ ಪ್ರಿಯಾಮಣಿ ರಿಜಿಸ್ಟರ್ ಮ್ಯಾರೇಜ್ !!!!!

ಜೀವನದ ಅತ್ಯಂತ ಮಧುರ ಕ್ಷಣ ಮದುವೆ. ಹೀಗಾಗಿ, ಮದುವೆಯನ್ನ ತುಂಬಾ ಗ್ರ್ಯಾಂಡ್ ಆಗಿ ಆಗಬೇಕು ಎನ್ನುವುದು ಬಹುತೇಕರ ಬಯಕೆ. ಆದರೆ, ಅದ್ಧೂರಿ ಮದುವೆಗೆ ಗುಡ್ ಬೈ ಹೇಳಿರುವ ಪ್ರಿಯಾಮಣಿ ರಿಜಿಸ್ಟರ್  ಮದುವೆ ಆಗುತ್ತಿದ್ದಾರೆ.

 

ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಜೋಡಿ ಇಂದು ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.
ಮದುವೆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ಜೋಡಿ ಮುಂದಿನ ವರ್ಷ ಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದರು.
ನಟಿ ಪ್ರಿಯಾಮಣಿ ತಮ್ಮ ಮದುವೆಯ ವಿಷಯವನ್ನು ಆದಷ್ಟು ಗುಟ್ಟಾಗಿ ಇಟ್ಟಿದ್ದು ಇಂದು ಬೆಂಗಳೂರಿನ ಶಿವಾಜಿನಗರದ ರಿಜಿಸ್ಟಾರ್ ಆಫೀಸಿನಲ್ಲಿ ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ. ನಾಳೆ ಚಿತ್ರರಂಗದ ಗಣ್ಯರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಸೆಪ್ಶನ್ ಏರ್ಪಡಿಸಿದ್ದಾರೆ.
ಮುಸ್ತಾಫಾ ರಾಜ್ ಮುಂಬೈ ನವರು ಸಿ.ಸಿ.ಎಲ್ ಹಿಂದಿನ ಮುಖ್ಯ ವ್ಯಕ್ತಿ ಹಾಗೂ ದೊಡ್ಡ ಉದ್ಯಮಿ. ’ಸಿನಿಮಾ ತಾರೆಯರು ಕ್ರಿಕೆಟ್ ಆಡಿದರೆ ಹೇಗೆ?’ ಎಂಬ ಕಾನ್ಸೆಪ್ಟ್ ರೂಪುಗೊಳಿಸಿದವರ ಪೈಕಿ ಮುಸ್ತಫಾ ರಾಜ್ ಕೂಡ ಒಬ್ಬರು.
ಮುಸ್ತಾಫಾ ರಾಜ್ ಅವರೊಂದಿಗೆ 2016 ರಲ್ಲಿ ನಟಿ ಪ್ರಿಯಾಮಣಿ ಸಾಂಪ್ರದಾಯಿಕ ವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಿಯಾಮಣಿ ಮದುವೆಯ ನಂತರವೂ ಚಿತ್ರಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.  

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top