Raambo 2 gIF

rlr gIF rELEASE

adweb

anigif seizer

`ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ’ ಚಿತ್ರಕ್ಕೆ ಚಿಕ್ಕಮಗಳೂರಿನಲ್ಲಿ ಬಿರುಸಿನ ಚಿತ್ರೀಕರಣ :

ರೋಲಿಂಗ್ ಡ್ರೀಮ್ಸ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಎನ್.ವಿಜಯಕುಮಾರ್, ಪ್ರವೀಣ್‍ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್‍ಕುಮಾರ್ ಅವರು ನಿರ್ಮಿಸುತ್ತಿರುವ `ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ` ಚಿತ್ರಕ್ಕಾಗಿ ಕಂಚನ್ ಕೌಸ್ತುಭ ಅವರು ಬರೆದಿರುವ `ಹೇಳದಂತೆ ಹೇಳಿದಂತೆ ಹೇಳಿದೆ. ಮನ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಿದೆ` ಎಂಬ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಪ್ರಭು ಹಾಗೂ ಸಂಯುಕ್ತ ಹೆಗಡೆ ಅಭಿನಯಿಸಿದ ಈ ಹಾಡಿಗೆ ಸ್ನೇಹ ನೃತ್ಯ ನಿರ್ದೇಶನ ಮಾಡಿದ್ದಾರೆ.

ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಅರ್ಧ ಭಾಗದಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಉಡುಪಿ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಕಲ್ಯಾಣ್ ಸಮಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕಿರಣ್ ವಾರಣಾಸಿ ಸಂಗೀತ ನೀಡಿದ್ದಾರೆ. .ಸುರೇಶ್‍ಕುಮಾರ್ ಸಂಕಲನ, ಸ್ನೇಹ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಸುಮಿತ್ ಪಟೇಲ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರವೀಣ್ ಸೂಡ ಸಂಭಾಷಣೆ ಬರೆದಿದ್ದಾರೆ.

ಪ್ರಭು ಮುಂಡಕರ್(ಊರ್ವಿ), ಸಂಯುಕ್ತ ಹೆಗಡೆ(ಕಿರಿಕ್ ಪಾರ್ಟಿ), ಎದಕಲ್ಲುಗುಡ್ಡ ಚಂದ್ರಶೇಖರ್, ರಾಮಕೃಷ್ಣ, ರಂಗಿತರಂಗ ಅರವಿಂದ್, ಸುಶ್ಮಿತಾ ಗೌಡ, ವಿಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Rate this item
(0 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top