chamak running success

anigif

adweb

raju

’ಕುರುಕ್ಷೇತ್ರ’ ಚಿತ್ರಕ್ಕೆ ಅಭಿಮನ್ಯುವಿಗೆ ಉತ್ತರೆ ಸಿಕ್ಕಾಯ್ತು..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ ನೇ ಚಿತ್ರ ’ಕುರುಕ್ಷೇತ್ರ’ಚಿತ್ರದ ಪಾತ್ರಕ್ಕೆ ಹೊಸ ಹೊಸ ನಟ ನಟಿಯರು ಆಯ್ಕೆಯಾಗುತ್ತಿದ್ದಾರೆ .

ಈಗ ಹೊಸದಾಗಿ ಉತ್ತರೆಯ ಪಾತ್ರಕ್ಕಾಗಿ ಆಯ್ಕೆಯಾದವರು  ೨೦೧೫ ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ವಿಜೇತೆ ಹಾಗೂ ೨೦೧೫ ರಲ್ಲಿ ’ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಅದಿತಿ ಆರ್ಯ ಕನ್ನಡದ ’ಕುರುಕ್ಷೇತ್ರ’ದಲ್ಲಿ ಅಭಿನಯಿಸಲಿದ್ದಾರೆ. ಈಕೆ ಮಾಡಲ್ ಕಮ್ ನಟಿಯಾಗಿದ್ದು, ೨೦೧೫ ರಲ್ಲಿ ಮಿಸ್ ಫೆಮಿನಾ ಮಿಸ್ ಇಂಡಿಯಾ ವಿಜೇತರಾಗಿದ್ದಾರೆ.
ಅದಿತಿ ಆರ್ಯ ಅವರಿಗೆ ಕನ್ನಡದಲ್ಲಿ ಮೊದಲ ಸಿನಿಮಾ ಆದರೆ, ಇದಕ್ಕು ಮುಂಚೆ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನ ’ಇಜಂ’ ಚಿತ್ರದಲ್ಲಿ ಅದಿತಿ ನಾಯಕಿ ಆಗಿ ಅಭಿನಯಿಸಿದ್ದಾರೆ.
ದರ್ಶನ್ ಕುರುಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅದಿತಿ ಆರ್ಯ, ನಿಖಿಲ್ ಗೆ ಜೋಡಿಯಾಗಲಿದ್ದಾರೆ. ಕನ್ನಡದ ಕುರುಕ್ಷೇತ್ರ ಚಿತ್ರದ ನಟಿ ಅದಿತಿ ಆರ್ಯ ’ಉತ್ತರೆ’ ಪಾತ್ರವನ್ನ ನಿರ್ವಹಿಸಲಿದ್ದಾರೆ. ವಿರಾಟ’ ರಾಜನ ಮಗಳು ’ಉತ್ತರೆ’. ಅಭಿಮನ್ಯುವಿನ ಮಡದಿ. ಅಂದ್ರೆ, ’ಕುರುಕ್ಷೇತ್ರ’ದಲ್ಲಿ ಅದಿತಿ, ಅಭಿಮನ್ಯುಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
’ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್, ರವಿಚಂದ್ರನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ರವಿಶಂಕರ್, ಸಾಯಿ ಕುಮಾರ್ ಹೀಗೆ ಸ್ಟಾರ್ ನಟರ ಜೊತೆಗೆ ಸ್ನೇಹ, ಹರಿಪ್ರಿಯಾ, ರೆಜಿನಾ ಅಂತಹ ನಟಿಯರು ಬಣ್ಣ ಹಚ್ಚಿದ್ದಾರೆ. ಈಗ ಅವರ ಜೊತೆಯಾಗಿ ಅದಿತಿ ’ಕುರುಕ್ಷೇತ್ರ’ದಲ್ಲಿ ಬಣ್ಣ ಹಚ್ಚಲಿದ್ದಾರೆ.

Rate this item
(1 Vote)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top