chamak running success

anigif

adweb

raju

ನಾಳೆಯಿಂದ ತೆರೆಯ ಮೇಲೆ `ಮುಗುಳುನಗೆ':

 

ಅಂದು 2006 ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆದ `ಮುಂಗಾರು ಮಳೆ' ಮೂಲಕ ದಾಖಲೆ ಬರೆದ ಜೋಡಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ 2008 ಜನವರಿ ತಿಂಗಳಿನಲ್ಲಿ ಒಂದು ಮಧುರುವಾದ ಪ್ರೇಮಕಥೆ `ಗಾಳಿಪಟ'ದಿಂದ ಪ್ರೇಕ್ಷಕರ ಮುಂದೆ ಬಂದು ಮನರಂಜನೆಯನ್ನು ನೀಡಿದ್ದರು. ಇಂದು 2017 ಸೆಪ್ಟೆಂಬರ್ 1 ರಂದು `ಮುಗುಳು ನಗೆ'ಯ ಮೂಲಕ ನಗೆಯ ಹಬ್ಬವನ್ನು ನೀಡಲು ಮುಂದಾಗಿದ್ದಾರೆ.

`ಮುಗುಳು ನಗೆ' ಏಳು ಹಾಡುಗಳ ಸಂಗಮ, ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಜೋಡಿಗೆ ವಿ ಹರಿಕೃಷ್ಣ ಅವರ ಸಂಗೀತ ಈಗಾಗಲೇ ಮನೆ ಮಾತಾಗಿದೆ. ಚಿತ್ರದ ನಿರ್ಮಾಪಕ ಸಯ್ಯದ್ ಸಲಾಂ ಅವರು ಎಸ್ ಎಸ್ ಫಿಲ್ಮ್ಸ್, ಗೋಲ್ಡನ್ ಮೂವೀಸ್ ಹಾಗೂ ಯೋಗರಾಜ್ ಸಿನಿಮಾಸ್ ಸಹಯೋಗದೊಂದಿಗೆ `ಮುಗುಳು ನಗೆ' ನಿರ್ಮಾಣ ಮಾಡಿದ್ದಾರೆ. ವಿಶೇಷ ಬಗೆಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ್ದು ಈಗ ಧಾಖಲೆ ಆಗಿದೆ.

`ಮುಗುಳು ನಗೆ' ಚಿತ್ರದಿಂದ ಯೋಗರಾಜ್ ಭಟ್ಟರು ಪ್ರೀತಿಯನ್ನು ಹುಡುಕುವ ಕೆಲಸವನ್ನು ನಾಯಕನಿಂದ ಮಾಡಿಸುತ್ತಾ ಅನೇಕ ಹೊಸ ಬಗೆಯ ವಿಚಾರಗಳನ್ನು ಹೇಳುತ್ತಾ ಹೋಗುತ್ತಾರೆ. ನಗುವುದೇ ನಾಯಕನ ಧರ್ಮ. ಆತನ ಜೀವನದಲ್ಲಿ ಬಂದು ಹೋಗುವ ಪ್ರೇಮಿಗಳೆ ಪ್ರಮುಖ ಪಾತ್ರದಾರಿಗಳು. ಯೋಗರಾಜ ಭಟ್ಟರ ಕಥೆಗೆ ಅವರದೇ ಚಿತ್ರಕಥೆ, ಸಂಭಾಷಣೆ ಸಹ ನೀಡಿದ್ದಾರೆ. ಇದು ಒಂದು ರೊಮ್ಯಾಂಟಿಕ್ ಕಥೆ ಹೊಂದಿರುವ ಹಾಸ್ಯ ರಸಾಯನ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಾಲ್ವರು ನಾಯಕಿಯರು. ಆಶಿಕ ರಂಗನಾಥ್ ನಾಯಕನ ಹದಿಹರೆಯದ ವಯಸ್ಸಿನಲ್ಲಿ ಕಾಣಿಸಿಕೊಳ್ಳುವವರು, ನಿಕಿತ ನಾರಾಯಣ್ ಜೀವನದಲ್ಲಿ ತನ್ನ ವೃತ್ತಿಯನ್ನು ಆರಾಧಿಸುವ ಆಧುನಿಕ ಕಾಲದ ಹುಡುಗಿ, ಮೂರನೇ ನಾಯಕಿ ಅಪೂರ್ವ ಆರೋರಾ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಜೀವನದಲ್ಲಿ ಮೌಲ್ಯಗಳನ್ನು ನಂಬಿರುವವರು. ಇದರ ಜೊತೆಗೆ ಅಮೂಲ್ಯ ಅತಿಥಿ ಪಾತ್ರದಲ್ಲಿ ನಾಯಕನಿಗೆ ಮಾರ್ಗದರ್ಶನ ನೀಡುವ ನಾಯಕಿ. ಈ ನಾಯಕಿಯರ ಜೊತೆ ನವಿರಾದ ಸಂಭಾಷಣೆ, ಮೋಜು, ಮಸ್ತಿ ಮನಕ್ಕೆ ತಟ್ಟುವ ವಿಚಾರಗಳನ್ನು ನಿರ್ದೇಶಕ ಯೋಗರಾಜ ಭಟ್ಟರು ತುಂಬಿದ್ದಾರೆ.

ಅತಿಥಿ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್, ವಿಶೇಷ ಪಾತ್ರದಲ್ಲಿ ಅನಂತ್ ನಾಗ್ ಅಲ್ಲದೆ ರಂಗಾಯಣ ರಘು, ಅಚ್ಯುತ್ ಕುಮಾರ್, ಮಂಜುನಾಥ್ ಹೆಗ್ಡೆ, ರಾಮ ರಾಮ ರೇ ಧರ್ಮಣ್ಣ, ಚಂದನ್, ಸಾಗರ್ ಹಾಗೂ ಇತರರು ತಾರಾಬಳಗದಲ್ಲಿ ಇದ್ದಾರೆ.
ವಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನದ ಹಾಡುಗಳಲ್ಲಿ ರೂಪಸಿ ಸುಮ್ಮನೆ....ಹೊಡಿ ಒಂಬತ್ತು, ಮುಗುಳು ನಗೆ ಶೀರ್ಷಿಕೆ ಗೀತೆ, ಕನ್ನಡಿ ಇಲ್ಲದ ಊರಿನಲ್ಲಿ,....ಕೆರೆ ಏರಿ....ಅತ್ಯಂತ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದೆ.

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಗೀತ ಸಾಹಿತ್ಯ, ಸುಜ್ಞಾನ್ ಅವರ ಛಾಯಾಗ್ರಹಣ, ಸುರೇಶ್ ಅರ್ಮೂಗಮ್ ಸಂಕಲನ, ಮುರಳಿ ಹಾಗೂ ರಾಜು ಅವರ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ,ವಿಕ್ರಮ್ ಮೋರ್ ಅವರ ಸಾಹಸ ಒದಗಿಸಿದ್ದಾರೆ.
ಇದೆ ಶುಕ್ರವಾರ `ಮುಗುಳು ನಗೆ' ನಗೆ ಶುರು ರಜತ ಪರದೆಯ ಮೇಲೆ. ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡುತ್ತಾ ಇರುವವರು ಮೈಸೂರು ಟಾಕೀಸ್ ಜಾಕ್ ಮಂಜುನಾಥ್ ಅವರು.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top