mugulu

zeee n

adweb

raj vishnu

ಲೈಫ್ ಜೊತೆ ಒಂದು ಸೆಲ್ಫಿ : ಬರೀ ಪೋಸ್ಟರ್ ಗೆ ಪ್ರೇಕ್ಷಕ ಫಿದಾ

ದಿನಕರ ತೂಗುದೀಪ ಅವರ ಮುಂದಿನ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಸಖತ್ ಕುತೂಹಲ ಕೆರಳಿಸಿದೆ. ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಚಿತ್ರಕ್ಕೆ ದಿನಕರ್ ಪತ್ನಿ ಮಾನಸ ಚಿತ್ರಕಥೆ ಬರೆದಿದ್ದಾರೆ.

’ಲೈಫ್ ಜೊತೆ ಒಂದು ಸೆಲ್ಫಿ’ ಸಿನಿಮಾ ಮೂರು ಮಂದಿ ಸ್ನೇಹಿತರ ಕಥೆ ಇದಾಗಿದ್ದು, ಸಿನಿಮಾದಲ್ಲಿ ಪ್ರಜ್ವಲ್ ಕೋಟ್ಯಾದಿಪತಿ, ಪ್ರೇಮ್ ಸಾಫ್ಟ್ ವೇರ್ ಎಂಜಿನೀಯರ್, ಹರಿಪ್ರಿಯಾ ಕೆಲಸ ಹುಡುಕುವ ಯುವತಿ ಪಾತ್ರದಲ್ಲಿ ನಟಿಸಲಿದ್ದಾರೆ. ಮೊದಲ ಶೂಟಿಂಗ್ ಗೋವಾದಲ್ಲಿ ನಡೆಯಲಿದೆ.  

ಸಿನಿಮಾ ಒಂದು ಫ್ಲಾಶ್ ಬ್ಯಾಕ್ ಸುತ್ತ ಸುತ್ತುತ್ತದೆ, ಬದುಕಿನ ಸಂತೋಷದ ಕ್ಷಣಗಳನ್ನು ಇಂದು ನಾವು ಸೆಲ್ಫೀ ಮೂಲಕ ಸೆರೆ ಹಿಡಿಯುತ್ತೇವೆ, ಆ ಜೀವನ ಪ್ರಯಾಣವೇ ’ಲೈಫ್ ಜೊತೆ ಒಂದ್ ಸೆಲ್ಫೀ’ ಕತೆಯಾಗಿದೆ ಎಂದು ದಿನಕರ್ ವಿವರಿಸಿದ್ದಾರೆ.
ಪ್ರಜ್ವಲ್ ದೇವರಾಜ್ ತಾಯಿ ಪಾತ್ರದಲ್ಲಿ ಸುಧಾರಾಣಿ ನಟಿಸಲಿದ್ದಾರೆ. ಸಾಧು ಕೋಕಿಲಾ ಕೂಡ ಅಭಿನಯಿಸುತ್ತಿದ್ದು, ಸಮೃದ್ಧಿ ಕ್ರಿಯೇಷನ್ ಸಿನಿಮಾ ನಿರ್ಮಿಸುತ್ತಿದೆ. ಹರಿಕೃಷ್ಣ ಸಂಗೀತ ನೀಡಲಿದ್ದು, ಶಚಿನಾ ಹೆಗ್ಗಾರ್ ಮತ್ತು ರೇಷ್ಮಿ, ನಿರಂಜನ ಬಾಬು, ವಿನ್ಯಾಸಕರಾಗಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top