IB anigif

Ayugya Gif

adweb

udgharsha

ಪೈಲ್ವಾನ್ ನಲ್ಲಿ ಸುದೀಪ್ ಪೈಲ್ವಾನ್ ಹೌದು, ಬಾಕ್ಸರ್ ಕೂಡ ಹೌದು...!!!

ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ಕೃಷ್ಣ ಪೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ’ಪೈಲ್ವಾನ್’ ಚಿತ್ರದ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅದರ ಜೊತೆಗೆ ಇನ್ನೊಂದು ಸರ್ ಪ್ರೈಸ್ ಕೂಡ ಇದೆ.

’ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಕೇವಲ ಬಾಕ್ಸರ್ ಆಗಿ ಮಾತ್ರ ಅಲ್ಲ, ಕುಸ್ತಿಪಟು ಆಗಿಯೂ ಮಿಂಚಲಿದ್ದಾರೆ. ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್  ಬಾಕ್ಸಿಂಗ್ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದೆ.
ಸುದೀಪ್ ಗೆ ವಿದೇಶಿ ಫೈಟ್ ಮಾಸ್ಚರ್ ತರಬೇತಿ ನೀಡುತ್ತಿದ್ದು, ಪೈಲ್ವಾನ್’ ಚಿತ್ರದಲ್ಲಿ ಬಾಕ್ಸಿಂಗ್ ಹಾಗೂ ಕುಸ್ತಿಗೆ ಸಂಬಂಧಪಟ್ಟ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿನ ಬಾಕ್ಸಿಂಗ್ ಗೆ ಸಂಬಂಧಿಸಿದ ಸ್ಟಂಟ್ ಗಳನ್ನ ವಿದೇಶದ ಸ್ಟಂಟ್ ಮಾಸ್ಟರ್ ಗಳು ಸಂಯೋಜಿಸಲಿದ್ದು,  ಕುಸ್ತಿಗೆ ಸಂಬಂಧಿಸಿದ ಸ್ಟಂಟ್ ಹಾಗೂ ದೃಶ್ಯಗಳನ್ನ ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಿಸಲಾಗುತ್ತದೆ ಎಂದಿದ್ದಾರೆ.     
ಅಕ್ಟೋಬರ್ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ.  ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್ ಅವರು ಛಾಯಾಗ್ರಹಣ ಮಾಡಲಿದ್ದು, ಆರ್.ಆರ್.ಆರ್. ಮೋಷನ್ ಪಿಕ್ಚರ್ ಬ್ಯಾನರ್ ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ.

Rate this item
(1 Vote)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top