mugulu

zeee n

adweb

raj vishnu

'ವಿಷ್ಣುವರ್ಧನ' ಖ್ಯಾತಿಯ ಪಿ. ಕುಮಾರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಚಿತ್ರವನ್ನು ಯಾರು ನಿರ್ಮಿಸುತ್ತಾರೆ?ಯಾರು ನಿರ್ದೇಶಿಸುತ್ತಾರೆ? ಎಂಬುದಕ್ಕೆ ಪಕ್ಕಾ ಮಾಹಿತಿ ಸಿಕ್ಕಿದೆ.

ಹೌದು, ದರ್ಶನ್ ಅವರ 51ನೇ ಚಿತ್ರವನ್ನು ಬಿ. ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುವುದು ಖಾತ್ರಿಯಾಗಿದೆ.
ಈ ಚಿತ್ರವನ್ನು ವಿಷ್ಣುವರ್ಧನ, ಚಾರುಲತ,ರಾಜ ರಾಜೇಂದ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ. ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ.

'ಸಿನಿಲೋಕ'ಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

"ಹೌದು,ನಾವು ದರ್ಶನ್ ಅವರ 51ನೇ ಚಿತ್ರವನ್ನು ನಿರ್ಮಿಸುತ್ತಿದ್ದೇವೆ,2015 ರಲ್ಲೇ ನಾವು ಅವರ 51ನೇ ಚಿತ್ರದ ಕಾಲ್‌ಶೀಟ್ ಪಡೆದುಕೊಂಡಿದ್ದೆವು. ಅದರಂತೆಯೇ ಈಗ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದೇವೆ. 'ವಿಷುವರ್ಧನ' ನಿರ್ದೇಶಿಸಿದ್ದ ಪಿ. ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ. ಹರಿಕೃಷ್ಣ ಮತ್ತು ಕುಮಾರ್ ಇಬ್ಬರು ಸೇರಿ ಕಥೆ ಹೆಣೆದಿದ್ದಾರೆ, ಅದಕ್ಕೆ ಚಿತ್ರಕಥೆ,ನಿರ್ದೇಶನದ ಮಾಡುವ ಜವಾಬ್ದಾರಿ ಪಿ. ಕುಮಾರ್ ಅವರದ್ದಾಗಿದೆ.
ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ, ನವೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಸಾದ್ಯತೆ ಇದೆ. ದರ್ಶನ್ ಅವರ 'ಮುನಿರತ್ನ ಕುರುಕ್ಷೇತ್ರ' ಮುಗಿದ ನಂತರ ನಮ್ಮ ಚಿತ್ರ ಪ್ರಾರಂಭವಾಗುವುದು ಖಚಿತ" ಎನ್ನುತ್ತಾರೆ ಶೈಲಜಾ ನಾಗ್.

ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಮತ್ತು ಮುಂತಾದ ಮಾಹಿತಿಗಳನ್ನು ಅವರು ಬಿಟ್ಟು ಕೊಡಲಿಲ್ಲ.

Rate this item
(2 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top