mugulu

zeee n

adweb

raj vishnu

“ಶಶಾಂಕ್ ಸಿನಿಮಾಸ್” ಉದ್ಘಾಟಿಸಿದ ಡಾ|| ಹಂಸಲೇಖ

ಯಶಸ್ವಿ ನಿರ್ದೇಶಕ ಶಶಾಂಕ್ ಇದೀಗ “ಶಶಾಂಕ್ ಸಿನಿಮಾಸ್” ಎಂಬ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಅವರ ಕಛೇರಿಯಲ್ಲಿ ಶಶಾಂಕ್‍ರವರ ಗುರುಗಳಾದ “ಡಾ|| ಹಂಸಲೇಖ” ರವರು ಜ್ಯೋತಿ ಬೆಳಗುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಾಯಕ ನಟರಾದ ಅಜೇಯ್ ರಾವ್, ರಿಷಿ, ದಿಲೀಪ್ ಪ್ರಕಾಶ್ ಮತ್ತು ನಿರ್ಮಾಪಕರಾದ ಉದಯ್ ಮೆಹ್ತಾ, ಜಿ. ಗಂಗಾಧರ್ ಮುಂತಾದವರು ಉಪಸ್ಥಿತರಿದ್ದು ತಂಡಕ್ಕೆ ಶುಭ ಕೋರಿದರು.
ಸಾಮಾಜಿಕ ಕಳಕಳಿಯ ಅಪ್ಪಟ ಕನ್ನಡ ಸಿನಿಮಾಗಳನ್ನು ನಿರ್ಮಿಸುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು
ಶಶಾಂಕ್ ತಿಳಿಸಿದ್ದಾರೆ.
“ಶಶಾಂಕ್ ಸಿನಿಮಾಸ್” ಈಗಾಗಲೇ ಮೂರು ಚಿತ್ರಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಮೊದಲನೇ ಚಿತ್ರವಾಗಿ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ” ಚಿತ್ರ ನವಂಬರ್ ತಿಂಗಳಲ್ಲಿ ಶುರುವಾಗಲಿದೆ.
ಎರಡನೆಯ ಚಿತ್ರದಲ್ಲಿ ಅಪರೇಷನ್ ಅಲಮೇಲಮ್ಮ ಖ್ಯಾತಿಯ “ರಿಷಿ” ನಾಯಕರಾಗಿ ಅಭಿನಯಿಸಲಿದ್ದು ಚಿತ್ರ ಮುಂದಿನ ವರ್ಷ ಎಪ್ರಿಲ್‍ನಲ್ಲಿ ಪ್ರಾರಂಭವಾಗಲಿದೆ.
ಈ ಎರಡೂ ಚಿತ್ರಗಳನ್ನು ಹೊಸ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಮೂರನೆಯ ಸಿನಿಮಾವನ್ನು ಸ್ವತಃ “ಶಶಾಂಕ್” ನಿರ್ದೇಶಿಸಲಿದ್ದು, ಕ್ರೇಜಿಬಾಯ್ ಖ್ಯಾತಿಯ “ದಿಲೀಪ್ ಪ್ರಕಾಶ್” ನಾಯಕರಾಗಿ ಅಭಿನಯಿಸಲಿದ್ದಾರೆ.
Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top