mugulu

zeee n

adweb

raj vishnu

ರೈತರು ಹಾಗೂ ಸೈನಿಕರ ಮಹತ್ವವನ್ನು ಹೇಳುವ “ಶ್ರೇಷ್ಠರು”

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಮೂಲಕವು ಚಿತ್ರರಂಗದಲ್ಲಿ ಒಂದಷ್ಟು ಪ್ರತಿಭೆಗಳು ಸದ್ದು ಮಾಡುತ್ತಿವೆ. ನಮ್ಮ ದೇಶದ ಗಡಿಯನ್ನು ಕಾಯುವ ಯೋಧರು ಹಾಗೂ ಹಗಲಿರುಳೆನ್ನದೆ ಹೊಲದಲ್ಲಿ ದುಡಿಯುತ್ತಾ ನಮಗೆ ಅನ್ನ ನೀಡುವ ರೈತನ ಕುರಿತಾಗಿ ಒಂದು ಕಿರುಚಿತ್ರವನ್ನು ತ್ಯಾಗರಾಜು ಎಂಬ ಯುವ ಪ್ರತಿಭೆ ನಿರ್ದೇಶಿಸಿದ್ದಾರೆ. 

ಶ್ರೇಷ್ಠರು ಎಂಬ ಹೆಸರಿನ ಈ ಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‍ನಲ್ಲಿ ನಡೆಯಿತು.

ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ತ್ಯಾಗರಾಜ್ ತನ್ನ ಸ್ನೇಹಿತರೊಡಗೂಡಿ ಈ ಚಿತ್ರವನ್ನು ತಯಾರಿಸಿದ್ದಾರೆ. ಇವರೇ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಂಗವಿಕಲರಾದರು ಇಂತ ದೊಡ್ಡ ಪ್ರಯತ್ನಕ್ಕೆ ಮುಂದಾದ ತ್ಯಾಗರಾಜ್ ಅವರ ಸಾಹಸಕ್ಕೆ ಟಿ.ಜಿ.ರಾಜೇಶ್ವರಿ ಹಾಗೂ ರವಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಕೋಟೆಗಳ ನಾಡಿನ ಚಿತ್ರದುರ್ಗ ಹಾಗೂ ಚಳ್ಳಕೆರೆಯ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಸುಮಾರು 30 ನಿಮಿಷಗಳ ಅವಧಿಯ ಈ ಕಿರುಚಿತ್ರದ ಮೂಲಕ ದೇಶದ ಎರಡು ಕಣ್ಣುಗಳಂತಿರುವ ರೈತರು ಮತ್ತು ಸೈನಿಕರ ಕಷ್ಟಗಳು ಹಾಗೂ ಅವರ ಹಿರಿಮೆಗಳನ್ನು ಕುರಿತಾಗಿ ನಿರೂಪಿಸಲಾಗಿದೆ.

ರಾಮ ರಾಮ ರೇ ಖ್ಯಾತಿಯ ನೋಬಿನಾ ಪಾಲ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸೈನಿಕರು ಹಾಗು ರೈತರನ್ನು ನಾವೆಲ್ಲಾ ಗೌರವಿಸಬೇಕು ಎಂದು ಹೇಳಲಾಗಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ನವೀನ್, ವಿರಾಜ್ ಗಿರೀಶ್, ಬಿಜ್ಜಲ, ಅಶ್ವಿನಿ, ಭಾರ್ಗವ, ಮಹೇಶ್ ಅಭಿನಯಿಸಿದ್ದಾರೆ. ರವಿ ಮತ್ತು ಅಮರನಾಥ್ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ.

ಈ ಚಿತ್ರವನ್ನು ಚಿತ್ರದುರ್ಗ ಮತ್ತು ಇತರೆಡೆಗಳಲ್ಲಿ ಟಿಕೆಟ್ ಶೋ ಮೂಲಕ ಪ್ರದರ್ಶಿಸಿ ಜನರಿಗೆ ತಲುಪಿಸುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತದೆ. ಅಲ್ಲದೇ ಹಲವಾರು ಚಲನಚಿತ್ರೋತ್ಸವಗಳಿಗೆ ಕೂಡ ಈ ಚಿತ್ರವನ್ನು ಕಳುಹಿಸುವ ಯೋಜನೆಯಿದೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top