mugulu

zeee n

adweb

raj vishnu

`ಕಿಡಿ’ - ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಮುಂದೆ

 

ಮಾಸ್ಟರ್ ಚಾಯ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಟಿ.ನಾಗರಾಜ್ ಅವರು ನಿರ್ಮಿಸಿರುವ `ಕಿಡಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿ.ಟಿ.ಮಲ್ಲಿಕಾರ್ಜುನಯ್ಯ ಹಾಗೂ ಆರ್.ಧನಂಜಯ್ ಈ ಚಿತ್ರದ ಸಹ ನಿರ್ಮಾಪಕರು.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ .ರಘು ಎಸ್ ಈ ಚಿತ್ರದ ನಿರ್ದೇಶಕರು. ಎಮಿಲ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬೆನಕರಾಜು ಅವರ ಛಾಯಾಗ್ರಹಣವಿದೆ. ಎನ್.ಎಂ.ವಿಶ್ವ ಸಂಕಲನ, ಅಪ್ಪು ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ವಸಂತ್‍ರಾವ್ ಎಂ ಕುಲಕರ್ಣಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಮಲೆಯಾಳಂನಲ್ಲಿ ಸೂಪರ್ ಹಿಟ್ಟಾಗಿದ್ದ ಕಲಿ ಚಿತ್ರದ ರೀಮೇಕ್ `ಕಿಡಿ’. ಮಲೆಯಾಳದ ಸೂಪರ್ ಸ್ಟಾರ್ ಮಮ್ಮುಟಿ ಅವರ ಪುತ್ರ ಕಲಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಆ ಪಾತ್ರವನ್ನಿಲ್ಲಿ ಭುವನ್ ಚಂದ್ರ ನಿರ್ವಹಿಸಿದ್ದಾರೆ. ಪಲ್ಲವಿ ಗೌಡ, ಡ್ಯಾನಿ ಕುಟ್ಟಪ್ಪ, ಉಗ್ರಂ ಮಂಜು, ಮಜಾ ಟಾಕೀಸ್ ಪವನ್, ಯತಿರಾಜ್, ಮನಮೋಹನ್ ರೈ, ಕಾವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top