tarakaasura

ttm

adweb

udgharsha

"ವೈರ" ಈ ವಾರ ರಾಜ್ಯಾದ್ಯಂತ ಬಿಡುಗಡೆ


ಈ ಹಿಂದೆ `ರಥಾವರ` ಚಿತ್ರ ನಿರ್ಮಿಸಿದ್ದ ಧರ್ಮಶ್ರೀ ಮಂಜುನಾಥ್ ನಿರ್ಮಿಸಿರುವ `ವೈರ` ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ನವರಸನ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ನಿರ್ಮಾಪಕ ಮಂಜುನಾಥ್ ಅವರು ಈ ಸಿನಿಮಾ ನಿರ್ಮಿಸಲು ಕಾರಣ ಚಿತ್ರದ ಕಥೆಯಂತೆ. ನಿರ್ದೇಶಕ ನವರಸನ್ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂಬ ಮೆಚ್ಚುಗೆ ಖುದ್ದು ನಿರ್ಮಾಪಕರು ಮತ್ತು ಚಿತ್ರತಂಡದ ಕಡೆಯಿಂದ ಕೇಳಿ ಬರುತ್ತಿದೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನವರಸನ್ ಕಾಣಿಸಿಕೊಂಡಿರೋದು ವಿಶೇಷ. ಈ ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಎಲಿಮೆಂಟ್ ಹೊಂದಿದೆಯಂತೆ. ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ.


ಧರ್ಮಶ್ರೀ ಎಂಟರ್ ಪ್ರೈಸಸ್ ಮತ್ತು ಗೀತಾ ಎಂಟರ್ ಟೈನ್‍ಮೆಂಟ್ಸ್ ಲಾಂಛನದಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಮಹೇಶ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರವಿ ಪೂಜಾರ್ ಕಲೆ ಹಾಗೂ ಕಿನಾಲ್ ರಾಜ್ ಗೀತ ರಚನೆ ಇದೆ. ನವರಸನ್, ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣಿ, ಕೌತಾರ್, ಮಂಜುಳಾ, ಹ್ಯಾರಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top