anigif mufti

anigif athiratha

adweb

raj vishnu

ಚಿರು ಮೇಘನ ಮ್ಯಾರೇಜ್ ಸ್ಟೋರಿ

ಸ್ಯಾಂಡಲ್ ವುಡ್ ನ ಮತ್ತೊಂದು ತಾರಾಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಇದೇ ತಿಂಗಳ 22 ಕ್ಕೆ ನಡೆಯಲಿದೆ. ಬಹುಕಾಲ ಸ್ನೇಹಿತರಾಗಿದ್ದ ಇವರು ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ.


ಹಿರಿಯ ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ಆಟಗಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಒಟ್ಟಾಗಿ ಅಭಿನಯಿಸಿದ್ದರು. ಮೇಘನಾ ರಾಜ್ ಅವರು ಹಿರಿಯ ನಟ ಸುಂದರ್ ರಾಜ್ ನಟಿ ಪ್ರಮೀಳಾ ಜೋಷಾಯ್ ಅವರು ಏಕೈಕ ಪುತ್ರಿಯಾಗಿದ್ದು ಚಿರಂಜೀವಿ ಸರ್ಜಾ ಹಿರಿಯ ನಟ ಅರ್ಜುನ್ ಸರ್ಜಾ ಅವರ ಕುಟುಂಬದ ಕುಡಿ.
ಡಿಸೆಂಬರ್ ನಲ್ಲಿ ಮದುವೆ ಈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿರುವ ಜೋಡಿಯ ವಿವಾಹ ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿಯೇ ನಡೆಯಲಿದೆ.
ಸ್ಟಾರ್ ದಂಪತಿಯ ಮಕ್ಕಳು ಕನ್ನಡದ ಹಿರಿಯ ನಟ ಸುಂದರ್ ರಾಜ್ ಮತ್ತು ನಟಿ ಪ್ರಮೀಳಾ ಜೋಷಾಯ್ ದಂಪತಿಯ ಮಗಳು ಮೇಘನಾ ರಾಜ್. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿರಂಜೀವಿ ಖ್ಯಾತ ನಟ ಅರ್ಜುನ್ ಸರ್ಜಾ ಸೋದರಳಿಯನಾಗಿದ್ದು, ’ವಾಯುಪುತ್ರ’, ’ವರದನಾಯಕ’, ’ಆಟಗಾರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಲೀಲಾ ಪ್ಯಾಲೇಸ್ ನಲ್ಲಿ ಮದುವೆ ಸರಳವಾಗಿ ಮನೆಯಲ್ಲೇ ಮದುವೆ ನಿಶ್ಚಯ ಮಾಡಿಕೊಂಡು ಲೀಲಾ ಪ್ಯಾಲೇಸ್ ನಲ್ಲಿ ತಾರೆಗಳು ಹಾಗೂ ಬಂಧು ಮಿತ್ರರಿಗೆ ಔತಣಕೂಟ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Rate this item
(1 Vote)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top