Print this page

ಕರಿಯ 2 ಚಿತ್ರಕ್ಕೆ ಭರ್ಜರಿ ಬೇಡಿಕೆ

ಪ್ರಭು ಶ್ರೀನಿವಾಸ್ ನಿರ್ದೇಶನದ ’ಕರಿಯ-2' ಚಿತ್ರ ಕೊರಿಯಾ ಭಾಷೆಗೆ ರಿಮೇಕ್ ಆಗಲಿದೆ. ಗಣಪ’ ಖ್ಯಾತಿಯ ಸಂತೋಷ್ ಅಭಿನಯದ ’ಕರಿಯ-2' ಚಿತ್ರ ಇದೇ ತಿಂಗಳು ಬಿಡುಗಡೆಯಾಗುತ್ತಿದ್ದು, ಅಕ್ಟೋಬರ್ 13 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು,ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆಯುತ್ತಿದೆ.

 

ಸಂತೋಷ್ ಗೆ ನಟಿ ಮಯೂರಿ ಜೋಡಿಯಾಗಿದ್ದು, ಹೊಸ ಕರಿಯನ ಎಂಟ್ರಿಗೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಕರಿಯ ಕಮಾಲ್ ಮಾಡಲು ಸಿದ್ದವಾಗಿದೆ. ಚಿತ್ರದ ಹಕ್ಕನ್ನ ಮುಂಬಯಿ ಮೂಲದ ಸಂಸ್ಥೆಯೊಂದು ದುಬಾರಿ ಬೆಲೆಗೆ ಕೊಂಡುಕೊಂಡಿದ್ದು,  ಚಿತ್ರವನ್ನ ಹಿಂದಿ ಭಾಷೆಯಲ್ಲಿ ಮತ್ತು ಮರಾಠಿ ಭಾಷೆಯಲ್ಲಿ ಡಬ್ ಮಾಡಲು ಚಿಂತಿಸಿದ್ದಾರೆ. ಮತ್ತೊಂದೆಡೆ ತಮಿಳು ಮತ್ತು ತೆಲುಗಿನಲ್ಲೂ ’ಕರಿಯ-2' ಚಿತ್ರವನ್ನ ರೀಮೇಕ್ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ.  

ನಿರ್ಮಾಪಕರು ಹೇಳುವ ಪ್ರಕಾರ ಕನ್ನಡದಲ್ಲಿ ಒಬ್ಬ ನಟ ಪಡೆಯುವ ಸಂಭಾವನೆ ಮೊತ್ತಕ್ಕೆ ’ಕರಿಯ-2' ಚಿತ್ರದ ರೀಮೇಕ್ ಹಕ್ಕು ಖರೀದಿಯಾಗಿದ್ದು,  ನಿರ್ಮಾಪಕರಿಗೆ ಕರೆ ಮಾಡಿ ಮಾತನಾಡಿದ ಮುಂಬೈ ನಿರ್ಮಾಣ ಸಂಸ್ಥೆ ಅಗ್ರಿಮೆಂಟ್ ಕೂಡ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Rate this item
(0 votes)
Login to post comments

Related items