DKD Gif

Shatayu

adweb

Raambo 2 gIF

ಬಿಡುಗಡೆಗೆ ಸಜ್ಜಾದ ವೀಕೆಂಡ್ ಮೋಜಿನ ಥ್ರಿಲ್ಲರ್ ಕಂ ಹಾರರ್ ಡಮ್ಮಿ ಡಮಾರ್ :

 

ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ “ಡಮ್ಕಿ ಡಮಾರ್” ಇದೇ ತಿಂಗಳ 27ಕ್ಕೆ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲು ಸಿದ್ದವಾಗಿದೆ. ಈ ಚಿತ್ರದ ಆರಂಭದಲ್ಲಿ ಬರುವ ದೃಷ್ಯದಲ್ಲಿ ಮುನ್ನುಡಿ ಹಾಗೂ ವಿವರಣೆಯನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನೀಡಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸಿರುವ ಸದ್ಗುಣ ಮೂರ್ತಿ ತಮ್ಮ ಪುತ್ರ ಪ್ರದೀಪ್ ವರ್ಮಾ ಅವರನ್ನು ನಾಯಕನಾಗಿ ಪರಿಚಯಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಸ್ ಪ್ರದೀಪ್ ವರ್ಮಾ ಕೂಡಾ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕೀಬೋರ್ಡ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಸಿನಿಮಾವೊಂದನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬ ಕನಸು ಎಂತೆಂಥಾ ಸಾಹಸಗಳಿಗೂ ಕೈ ಹಾಕುವಂತೆ ಮಾಡುತ್ತೆ. ಆದರೆ ಎಸ್ ಪ್ರದೀಪ್ ವರ್ಮಾ ಅತ್ಯಂತ ರಿಸ್ಕೀ ಸಾಹಸವನ್ನು ಮೈಮೇಲೆಳೆದುಕೊಂಡು ಚೆಂದಗೆ ಇಡೀ ಚಿತ್ರ ರೂಪಿಸಿರುವ ಖುಷಿಯೊಂದಿಗೇ ತಮ್ಮ ಚಿತ್ರವನ್ನು ಪ್ರೇಕ್ಷಕರೆದುರು ತರಲು ಅಣಿಯಾಗಿದ್ದಾರೆ.


ಸಾಧು ಕೋಕಿಲಾ, ಅರ್ಜುನ್ ಜನ್ಯಾ, ಮನೋಮೂರ್ತಿ, ವಿ. ಮನೋಹರ್ ಸೇರಿದಂತೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರ ಜೊತೆ ಕೀ ಬೋರ್ಡ್ ಪ್ಲೇಯರ್ ಮತ್ತು ಸಂಯೋಜಕರಾಗಿ ಆಗಿ ಕಾರ್ಯ ನಿರ್ವಹಿಸುತ್ತಿರುವವರು ಪ್ರದೀಪ್. ಕೈತುಂಬಾ ಕೆಲಸ ಇದ್ದರೂ ಕೂಡಾ ಬೇರೇನನ್ನೋ ಮಾಡಬೇಕೆಂಬ ತಹತಹದಿಂದ ಈ ಚಿತ್ರದ ಕಥೆ ಮಾಡಿದ್ದ ಪ್ರದೀಪ್, ಕಥೆ ಚಿತ್ರಕಥೆ ಸಂಭಾಷಣೆ, ಸಂಗೀತ, ನಿರ್ದೇಶನದ ಜೊತೆಗೆ ಮುಖ್ಯ ಪಾತ್ರವನ್ನೂ ತಾವೇ ನಿರ್ವಹಿಸಿದ್ದಾರೆ. ಜೊತೆಗೆ ಇದೀಗ ತಾವೇ ಈ ಚಿತ್ರದ ಹಂಚಿಕೆದಾರರಾಗೋ ಧೈರ್ಯವನ್ನೂ ತೋರಿಸಿದ್ದಾರೆ.


ಡಮ್ಕಿ ಡಮಾರ್ ಎಂಬುದು ಪಕ್ಕಾ ಯೂತ್‍ಫುಲ್ ಕಥಾ ಹಂದರ ಹೊಂದಿದೆಯಂತೆ. ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೂ ಬ್ಯುಸಿಯಾಗಿರೋ ಯುವ ಜನತೆ ಆ ನಂತರದ ಎರಡು ದಿನಗಳಲ್ಲಿ ಟ್ರಕ್ಕಿಂಗ್ ಹೋಗೋ ಮೂಲಕ ರಿಲೀಫು ಕಂಡುಕೊಳ್ಳೋ ಟ್ರೆಂಡ್ ಬೆಳೆದಿದೆ. ಇಂಥಾದ್ದೇ ಔಟಿಂಗ್ ಸಂದರ್ಭದಲ್ಲಾಗೋ ಆಕ್ಸಿಡೆಂಟ್ ಹಿನ್ನೆಲೆಯ ಕಥೆಯನ್ನು ಮೆಡಿಕಲ್ ಸೈನ್ಸ್ ಲೇಪದೊಂದಿಗೆ ಹಾರರ್ ಮತ್ತು ಥ್ರಿಲ್ಲರ್ ಅಂಶಗಳನ್ನೂ ಬೆರೆಸಿ ಇಡೀ ಚಿತ್ರವನ್ನು ಚೆಂದಗೆ ರೂಪಿಸಲಾಗಿದೆ ಎಂಬುದು ಪ್ರದೀಪ್ ಭರವಸೆ.


ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರೂ ಕೂಡಾ ಮೆಚ್ಚಿಕೊಂಡೇ ಯು ಸರ್ಟಿಫಿಕೆಟ್ ಕೊಟ್ಟಿದ್ದಾರಂತೆ. ಚಿಕ್ಕಮಗಳೂರು, ಕೊಪ್ಪ, ಬೆಂಗಳೂರು, ಚೆನೈ ಮತ್ತು ಮಲೇಶಿಯಾಗಳಲ್ಲಿ ಚಿತ್ರೀಕರಣ ಮುಗಿಸಿ ನಾಲಕ್ಕು ಹಾಡುಗಳನ್ನೂ ರೂಪಿಸಿ ಇಡೀ ಚಿತ್ರವನ್ನು ಅಂತಿಮ ಹಂತಕ್ಕೆ ತಂದ ಪ್ರದೀಪ್ ಅವರ ಮುಂದಿದ್ದದ್ದು ಬಿಡುಗಡೆ ಮಾಡೋ ಸವಾಲು. ಇದಕ್ಕಾಗಿ ಪ್ರಯತ್ನ ಮಾಡಿ ಕಡೆಗೆ ಐನಾಕ್ಸ್‍ಗೆ ಒಂದು ಅಪ್ರೋಚ್ ಮಾಡಿದಾಗ ಅದರ ಮುಖ್ಯಸ್ಥರು ಮೆಚ್ಚಿಕೊಂಡು ಟೈಯಪ್ ಆದರಂತೆ. ಅದರ ಭಾಗವಾಗಿತೇ ಸದ್ಯ ಈ ಚಿತ್ರ 25ಕ್ಕೂ ಹೆಚ್ಚು ಮಲ್ಟಿಫ್ಲೆಕ್ಸ್‍ಗಳಲ್ಲಿ ಬಿಡುಗಡೆಯಾಗಲಿದೆಯಂತೆ.
ಇನ್ನುಳಿದಂತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಕಥೆಯನ್ನು ತಮ್ಮ ಧ್ವನಿಯಲ್ಲಿ ನರೇಟ್ ಮಾಡಿದ್ದಾರಂತೆ. ಎಲ್ಲ ಬಹುತೇಕ ಹೊಸಬರೇ ಕಾರ್ಯ ನಿರ್ವಹಿಸಿರೋ ಈ ಚಿತ್ರ ಇದೇ ತಿಂಗಳ 27ಕ್ಕೆ ಬಿಡುಗಡೆಯಾಗಲಿದೆ.


ಶ್ರೀ ಭೂಮಿಕ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಎಸ್. ಪ್ರದೀಪ್ ವರ್ಮಾ ಕಥೆ, ಚಿತ್ರಕತೆ, ಸಂಗೀತ, ನೃತ್ಯ ನಿರ್ದೇಶನ, ಸಹ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ವೇಲ್ಸ್ ಛಾಯಾಗ್ರಹಣ, ಸಾಯಿ ಸರ್ವೇಶ್ ಸಾಹಿತ್ಯ, ತಿಪ್ಪೇಸ್ವಾಮಿ ಸಂಕಲನ, ಮೈತ್ರೇಯಿ ಚಂದ್ರು ಮತ್ತು ಸುಂದರ್ ಸಹನಿರ್ಮಾಪಕರಾಗಿದ್ದು, ಪ್ರದೀಪ್ ವರ್ಮ, ಚೈತ್ರ ಶೆಟ್ಟಿ, ಜಗದೀಶ್ ವೆಂಕಿ, ಅನುಷ್ಕಾ ಶೆಟ್ಟಿ, ರಾಜೇಶ್, ಶಿವಾನಂದ, ಸುನೀಲ್‍ಕುಮಾರ್, ರವಿರಾಜ್, ಅಂಬಿಕಾ, ಮಣಿ, ಶೋಭಿತಾ ಇನ್ನು ಮುಂತಾದವರ ತಾರಾಬಳಗವಿದೆ.

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top