anigif mufti

anigif athiratha

adweb

raj vishnu

ದ್ವಾರಕೀಶ್ ಬ್ಯಾನರ್‍ನ 51ನೇ ಚಿತ್ರ `ಅಮ್ಮ ಐ ಲವ್ ಯು’

 

ಭಾಗ್ಯವಂತರು, ನೀ ಬರೆದ ಕಾದಂಬರಿ, ಸಿಂಗಪೂರ್‍ನಲ್ಲಿ ರಾಜಾಕುಳ್ಳ ಆಪ್ತಮಿತ್ರದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಟ್ಟ ದ್ವಾರಕೀಶ್ ಚಿತ್ರ ಬ್ಯಾನರ್‍ನ 51ನೇ ಚಿತ್ರ `ಅಮ್ಮ ಐ ಲವ್ ಯು` ಇತ್ತೀಚೆಗೆ ಆರಂಭವಾಯಿತು. ಬಿ.ಎಸ್. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ವೆಸ್ಟ್‍ ಆಫ್‍ ಕಾರ್ಡ್‍ ರಸ್ತೆಯಲ್ಲಿನ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ .

`ಅಮ್ಮ ಐ ಲವ್ ಯು` ಹೆಸರಿನ ಈ ಚಿತ್ರ ತಮಿಳಿನ `ಪಿಚ್ಚಕಾರನ್` ಸಿನಿಮಾದ ರೀಮೇಕ್ ಆಗಿದ್ದು, 50 ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿರಂಜೀವಿ ಸರ್ಜಾ, ಸಿತಾರಾ, ಪ್ರಕಾಶ್‍ಬೆಳವಾಡಿ, ಗಿರೀಶ್ ದ್ವಾರಕೀಶ್, ಕರಿಸುಬ್ಬು, ನಟನಾ ಪ್ರಶಾಂತ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಯೋಗೀಶ್ ಡಿ.ಬಂಗ್ಲೆ ಈ ಚಿತ್ರದ ಸಹನಿರ್ಮಾಪಕರು. ಗುರುಕಿರಣ್ ಅವರ ಸಂಗೀತ ಸಂಯೋಜನೆಯಲ್ಲಿ 4 ಹಾಡುಗಳಿದ್ದು, ಬಾಬು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಈ ಚಿತ್ರದ ಕಾರ್ಯನಿರ್ವಹಣೆ ಹಾಗೂ ನಿರ್ಮಾಣ ನಿರ್ವಹಣೆ ಜವಾಬ್ದಾರಿಯನ್ನು ಸೋಮು ವಹಿಸಿಕೊಂಡಿದ್ದಾರೆ. ರವಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top