chamak running success

anigif

adweb

raju

"ಸರ್ಕಾರ್" ಪೋಸ್ಟರ್ ಬಿಡುಗಡೆಯಾಯ್ತು


ರೌಡಿಸಂ ಎನ್ನುವುದು ನೀರಿನ ಮೇಲೆ ಗುಳ್ಳೆ ಇರುವಂತೆ. ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲಿಕ್ಕೆ ಆಗದು. ಇಂತಹ ಅಂಶಗಳನ್ನು ಹೊಂದಿರುವ ‘ಸರ್ಕಾರ್’ ಅಡಿಬರಹದಲ್ಲಿ ದಿ ಬುಲೆಟ್ ಅಂತ ಹೇಳಿಕೊಂಡಿರುವ ಸಿನಿಮಾವೊಂದು ಹುಬ್ಬಳ್ಳಿ, ಸಾತೋಡಿ ಜಲಪಾತ, ಉಡುಪಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಕಳೆದ ವರ್ಷ ಮೂರು ಸಾವಿರ ಮಠದ ಆವರಣದಲ್ಲಿ ಹಾಡುಗಳು ಬಿಡುಗಡೆಗೊಂಡಿತ್ತು. ಬೆಂಗಳೂರು ಯಲಹಂಕ ನಿವಾಸಿ ಎಸ್.ಮಂಜುಪ್ರೀತಮ್ ಅಪ್ಪಟ ಗಣೇಶ್ ಅಭಿಮಾನಿ. ಚಿಕ್ಕಂದಿನಿಂದಲೂ ಚಿತ್ರರಂಗಕ್ಕೆ ಬರಬೇಕೆಂಬ ಪಸೆಯಿಂದ ಹಲವರಲ್ಲಿ ಅವಕಾಶಕ್ಕಾಗಿ ಸೈಕಲ್ ಹೊಡೆದರೂ ಪ್ರಯೋಜನವಾಗಿಲ್ಲ. ಮುಂದೆ ಗಣೇಶ್ ಚಿತ್ರಗಳ ಕಾರ್ಯಕ್ರಮ, ಸೆಟ್‍ನಲ್ಲಿ ನಿರ್ದೇಶಕರ ಚಲನವಲನಗಳನ್ನು ತಿಳಿದುಕೊಂಡು ಮುಂದೆ ಸ್ವತಂತ್ರ ನಿರ್ದೇಶಕನಾಗಿ ಛಲವನ್ನು ಸಾಧಿಸಿದ್ದಾರೆ. ಅಲ್ಲದೆ ಮಹೂರ್ತ ಸಮಾರಂಭಕ್ಕೆ ಖುದ್ದು ಗಣೇಶ್ ದಂಪತಿಗಳು ಆಗಮಿಸಿ ಶುಭಕೋರಿದ್ದಾರಂತೆ.

ಬಾಲಿವುಡ್‍ನ ಸರ್ಕಾರ್ ಇದಕ್ಕೂ ಸಂಬಂದ ಇರುವುದಿಲ್ಲ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕೆಯನ್ನು ಶೋಭರಾಜ್ ಇಡಲಾಗಿದ್ದು, ಒಳ್ಳೆಯ ಕೆಲಸಗಳಿಗೆ ಮಾತ್ರ ರೌಡಿಯಾಗಿರುತ್ತಾನೆ. ನಾಯಕ ಇವರ ತಂಡಕ್ಕೆ ಸೇರಿಕೊಂಡು, ಆತನಂತೆ ಇರುವಾಗ ನಾಯಕಿ ಮಧ್ಯೆ ಪ್ರೀತಿ ಬೆಳಯುತ್ತದೆ.

ಇದಕ್ಕೂ ಮುನ್ನ ಕತೆಯು ಹುಬ್ಬಳ್ಳಿಯಲ್ಲಿ ತೆರೆದುಕೊಂಡು, ಆತ ಬೆಂಗಳೂರಿಗೆ ಬರಲು ಕಾರಣವೇನು. ಅಲ್ಲಿ ಇವರ ತಂಡಕ್ಕೆ ಹೇಗೆ ಸೇರಿಕೊಳ್ಳುತ್ತಾನೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಹುಬ್ಬಳ್ಳಿಯ ಜಾಗ್ವಾರ್‍ ಜಗ್ಗಿ ನಾಯಕನಾಗಿ ಹೊಸ ಅನುಭವ. ಡಾಕ್ಟರ್ ಪಾತ್ರದಲ್ಲಿ ಲೇಖಾಚಂದ್ರ ನಾಯಕಿ. ಇವರೊಂದಿಗೆ ಶೋಭರಾಜ್, ಧರ್ಮ, ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಉಗ್ರಂಮಂಜು, ನಾಯಕನ ತಾಯಿ ಪಾತ್ರದಲ್ಲಿ ಯಮುನಾ ನಟನೆ ಇದೆ. ತಂದೆತಾಯಿ, ಪ್ರೀತಿ, ಸ್ನೇಹ, ನಂಬಿದವರು ಎಲ್ಲರೂ ರೌಡಿಸಂ ಮಾಡಿದಾಗ ಕಳೆದುಕೊಳ್ಳುವುದು ಖಚಿತವೆಂದು ಸಂದೇಶದ ಮೂಲಕ ಹೇಳಲಾಗಿದೆ. ಛಾಯಗ್ರಹಣ ರಾಚ್‍ಪುಟಿ ಅರುಣ್‍ಕುಮಾರ್, ಸಾಹಸ ಮಾಸ್‍ಮಾದ, ನೃತ್ಯ ಸ್ಟಾರ್‍ನಾಗಿ, ಸಂಕಲನ ತೇಜು.ಡಿ.ಕುಮಾರ್ ಅವರದಾಗಿದೆ. ಶಂಕರ್‍ಮಹದೇವನ್, ಚಂದನ್‍ಶೆಟ್ಟಿ ಗಾಯನದ ಐದು ಹಾಡುಗಳಿಗೆ ಸತೀಶ್‍ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರವು ತೆರೆಗೆ ಬರಲು ಸಮೀಪವಾಗಿರುವುದರಿಂದ ಪೋಸ್ಟರ್ ಅನಾವರಣ ನೆಪಮಾಡಿಕೊಂಡು ನಿರ್ಮಾಪಕರು ಸಣ್ಣದೊಂದು ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏರ್ಪಾಟು ಮಾಡಿದ್ದರು. ನಿರ್ದೇಶಕ, ನಿರ್ಮಾಪಕರ ಹಿತೈಷಿಗಳು ಜಾಸ್ತಿ ಆಗಮಿಸಿದ್ದರಿಂದ ಸಮಾರಂಭವು ಒಡ್ರಾಸಿಯಲ್ಲಿ ನಡೆಯಿತು. ಇದರ ಮಧ್ಯೆ ಮೈಕ್ ಕೈಕೊಟ್ಟಿದ್ದರಿಂದ ಗಣ್ಯರುಗಳು ಪಾಠ ಒಪ್ಪಿಸುವಂತೆ ಚಿತ್ರಕ್ಕೆ ಶುಭ ಹಾರೈಸಿದರು. ಅದರಲ್ಲೂ ಹುಬ್ಬಳ್ಳಿಯಿಂದ ಬಂದವರೊಬ್ಬರು ನನ್ನ ಕಡೆಯಿಂದ 1000 ಟಿಕೆಟ್ ಖರೀದಿಸುವುದಾಗಿ ಹೇಳಿದರು. ಮಗ ನಾಯಕನಾಗುತ್ತಿರುವುದರಿಂದ ಅವನ ಸಲುವಾಗಿ ಪಾರ್ವತಿ.ಎಸ್. ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

Rate this item
(0 votes)
Login to post comments

anigif sam

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top