tarakaasura

ttm

adweb

udgharsha

ಅಂತರಾಷ್ಟ್ರೀಯ ಸಮಸ್ಯೆ ಹೊತ್ತ "ನೀ ಇಲ್ಲದ ಮಳೆ" :

 

2005ರಲ್ಲಿ ಬಾಯ್‍ಫ್ರೆಂಡ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜನಾರ್ಧನ್ ಆ ಚಿತ್ರದ ನಂತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿದ್ದಿಲ್ಲ. ನಂತರ ಕೆಲ ವರ್ಷಗಳ ಹಿಂದೆ ಸ್ವಯಂಕೃಷಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಅಮೋಘ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ನೀ ಇಲ್ಲದ ಮಳೆ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಜೊತೆಗೆ ಆ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಪೆರು ದೇಶದ ಚೆಲುವೆ ವ್ಯಾಲರಿ ನಾಯಕಿಯಾಗಿ ನಟಿಸಿದ್ದಾರೆ. ಇದೇ 12ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಈ ಬಗ್ಗೆ ಹೇಳಿಕೊಳ್ಳಲೆಂದು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಟಿ ಕರೆದಿತ್ತು.

ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಅಮೋಘ್ ಈ ಚಿತ್ರಕ್ಕೆ 28 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಅಮೆರಿಕಾದಲ್ಲೇ ಹೆಚ್ಚಿನ ಭಾಗದ ಶೂಟಿಂಗ್ ನಡೆಸಲಾಗಿದೆ. ನಮ್ಮ ಮದೇಶದಿಂದ ಅಮೆರಿಕಾಗೆ ಸ್ಟಡಿ ಹಾಗೂ ಕೆಲಸಕ್ಕೆಂದು ಹೋದವರು ಯಾಕೆ ಕಣ್ಮರೆಯಾಗುತ್ತಿದ್ದಾರೆ, ಅದಕ್ಕೆ ಕಾರಣಗಳೇನು ಎಂದು ಸಾಕಷ್ಟು ರೀಸರ್ಚ್ ಮಾಡಿ ಕಥೆಯಲ್ಲಿ ಅಳವಡಿಸಿಕೊಂಡೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದು, ಉತ್ತಮ ಸಂದೇಶ ಕೂಡ ಇದೆ. ಕರ್ನಾಟಕದ ಬೀದರ್, ಬಾಗಲಕೋಟೆ ಮುಂತಾದ ಕಡೆಗಳಲ್ಲಿಯೂ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಇಂದ್ರಸೇನಾ ಈ ಚಿತ್ರದ 5 ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಬಾಯ್ ಫ್ರೆಂಡ್ ಚಿತ್ರದಿಂದಲೂ ಜನಾರ್ಧನ್ ಜೊತೆ ಇಂದ್ರಸೇನಾ ಕೆಲಸ ಮಾಡಿದ್ದಾರೆ. ನಿರಂಜನ ಬಾಬು ಈ ಚಿತ್ರದ ಛಾಯಾಗ್ರಾಹಕರು. ಬೀದರ್ ಕ್ಷೇತ್ರದ ಬಿಜೆಪಿ ಸ್ಪರ್ಧಿಯಾಗಿದ್ದ ಶೈಲೇಂದ್ರ ಕೆ. ಬೆಲ್ದಾಳ್ ಹಾಗೂ ದೇವರಾಜ್ ಶಿಡ್ಲಘಟ್ಟ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರದ ನಾಯಕಿ ವ್ಯಾಲರಿ ಮಾತನಾಡಿ ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಥರದ ಪಾತ್ರ. ಈ ಹಿಂದೆ ಪೆರುವಿನಲ್ಲಿ ಒಂದಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೆ. ಅಲ್ಲದೆ ತಮಿಳಲ್ಲಿಯೂ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಿರುವುದು ಇದೇ ಮೊದಲು ಎಂದು ಹೇಳಿದರು. ನೀ ಇಲ್ಲದ ಮಳೆ ಚಿತ್ರದಲ್ಲಿ ಅಮೆರಿಕನ್ ಭಾಷೆಯನ್ನು ಕೆಲ ಸಂದರ್ಭಗಳಲ್ಲಿ ಬಳಸಲಾಗಿದೆ. ನಾಯಕಿಯ ತಂದೆಯ ಪಾತ್ರದಲ್ಲಿ ಹಿರಿಯ ನಟ ಗಿರೀಶ್ ಕಾರ್ನಾಡ್ ಹಾಗೂ ತಾಯಿಯ ಪಾತ್ರದಲ್ಲಿ ನಟಿ ಭವ್ಯ ಅವರು ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ತಬಲಾ ನಾಣಿ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಕಥೆ ಅವರ ಪಾತ್ರದ ಮೇಲೆ ಸಾಗುತ್ತದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜನಪದ ಗಾಯಕ ಆಲೂರು ನಾಗಪ್ಪ ಮಾತನಾಡಿ ನಾನು ಚಿತ್ರವನ್ನು ನೋಡಿದ್ದೇನೆ. ಚಿತ್ರದಲ್ಲಿ ಜನಜಾಗೃತಿ ಮೂಡಿಸುವಂಥ ಒಳ್ಳೆಯ ಅಂಶಗಳಿವೆ ಎಂದು ಹೇಳಿದರು. ನಿರ್ಮಾಪಕರ ಸ್ನೇಹಿತ ನಿವೃತ್ತ ಎಸ್.ಪಿ. ನಾಗರಾಜ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿ ಮಾತನಾಡುತ್ತ ನಾನು ಕೂಡ ಈ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ತುಂಬಾ ಚೆನ್ನಾಗಿವೆ. ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ಕಥೆ ಚಿತ್ರದಲ್ಲಿದೆ ಎಂದು ಸ್ನೇಹಿತ ದೇವರಾಜ್ ಹೇಳಿದ್ದಾರೆ ಎಂದು ಹೇಳಿದರು. ನೀ ಇಲ್ಲದ ಮಳೆ ಚಿತ್ರವು ಈಗಾಗಲೇ ಸೆನ್ಸಾರ್‍ನಲ್ಲಿ ಪಾಸಾಗಿದ್ದು ಎ ಪ್ರಮಾಣ ಪತ್ರ ಪಡೆದಿದೆ. ಚಿತ್ರವನ್ನು ಅಮೆರಿಕಾ, ಪೆರು ಮೊದಲಾದ ದೇಶಗಳಲ್ಲಿಯೂ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top