IB anigif

Ayugya Gif

adweb

udgharsha

'ಬಬ್ರೂ’ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದ ಬೆಳದಿಂಗಳ ಬಾಲೆ ಸುಮನ್‌ ನಗರ್‌ಕರ್‌ :

ಹೂ ಮಳೆ, ಬೆಳದಿಂಗಳ ಬಾಲೆ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮ ಸಹಜ ಸುಂದರದಿಂದ ಕನ್ನಡಿಗರ ಮನ ಮನೆ ಗೆದ್ದಿದ್ದ ಸುಮನ್‌ ನಗರ್‌ಕರ್‌ ವಿವಾಹವಾಗಿ ಅಮೇರಿಕಾಗೆ ಹಾರಿ ಹೋಗಿದ್ದರು. ಈಗ ಸಿನಿಮಾ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ವಾಪಾಸ್‌ ಬಂದಿದ್ದಾರೆ.

 

ಹೌದು ಸುಮನ್‌ ನಗರ್‌ಕರ್‌ ಬಬ್ರೂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಸಂಪೂರ್ಣ ಅಮೇರಿಕಾದಲ್ಲಿಯೇ ಚಿತ್ರೀಕರಣಗೊಂಡಿದ್ದು, ಇದರಲ್ಲಿ ಸುಮನ್‌ ನಗರ್‌ಕರ್‌ ಸಹ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿರುವ ಭಾರತೀಯ ಮೂಲದ ಅರ್ಜುನ್‌, ಅದೇ ದೇಶದಲ್ಲಿರುವ ವ್ಯಾಂಕೋವರ್ನಲ್ಲಿರುವ ತನ್ನ ಗೆಳತಿ ಮಾಯಾಳನ್ನು ಪ್ರೀತಿಸುತ್ತಿರುತ್ತಾನೆ. ಒಮ್ಮೆಯೂ ಭೇಟಿಯಾಗದ ಕಾರಣ ಒಮ್ಮೆ ವ್ಯಾಂಕೋವರ್‌ಗೆ ಹೋಗಲು ಅರ್ಜುನ್‌ ನಿರ್ಧಾರ ಮಾಡುತ್ತಾನೆ. ಇದು ಒಂದು ಕಡೆ ನಡೆಯುತ್ತಿರುವ ಕತೆಯಾದರೆ. ಮತ್ತೊಂದೆಡೆ ಅಮೇರಿಕಾದಲ್ಲಿರುವ ಸನಾ ಎಂಬ ಭಾರತೀಯ ಮಹಿಳೆ ತನ್ನ ಗಂಡನಿಂದ ಮುಕ್ತಿ ಪಡೆಯಲು ಹಾತೋರಿಯುತ್ತಿರುತ್ತಾಳೆ. ಅವಳು ಸಹ ವ್ಯಾಂಕೋವರ್‌ಗೆ ಹೋಗಲು ತೀರ್ಮಾನ ಮಾಡಿರುತ್ತಾಳೆ. ಈ ನಡುವೆ ಇಬ್ಬರೂ ಒಂದು ಜಾಹಿರಾತನ್ನು ನೋಡುತ್ತಾರೆ ಆ ಜಾಹಿರಾತಿನಲ್ಲಿ ಒಂದು ಕಾರನ್ನು ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಸಾಗಿಸಬೇಕಾಗಿರುತ್ತದೆ. ಕೆಲ ಅನಿವಾರ್ಯ ಕಾರಣಗಳಿಂದ ಅರ್ಜುನ್‌ ಮತ್ತು ಸನಾ ಇಬ್ಬರೂ ಅಪರಿಚತರಾದರೂ ಒಂದೇ ಕಾರಿನಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಾಗುತ್ತದೆ.

 

ಇಬ್ಬರು ಪ್ರಯಾಣ ಆರಂಭಿಸಿದಾಗ  ಮೆಕ್ಸಿಕೋದ  ರೈತನೊಬ್ಬ ಇವರ ಪ್ರಯಾಣದಲ್ಲಿ ಜತೆಯಾಗುತ್ತಾನೆ. ಈ ನಡುವೆ ಕಾರು ಕೆಲ ದುಷ್ಕರ್ಮಿಗಳಿಗೆ ಮತ್ತು ಪೊಲೀಸರಿಗೆ ಬೇಕಾಗಿರುತ್ತದೆ. ಕಾರು ಪೊಲೀಸರಿಗೆ ಮತ್ತು ದುಷ್ಕರ್ಮಿಗಳಿಗೆ ಏಕೆ ಬೇಕಾಗಿರುತ್ತದೆ. ಇದರಿಂದ ಸನಾ ಮತ್ತು ಅರ್ಜುನ್ಗೆ ತೊಂದರೆಯಾಗುತ್ತದಾ, ಇಬ್ಬರು ತಮ್ಮ ಗಮ್ಯವನ್ನು ಮುಟ್ಟುತ್ತಾರಾ ಎಂಬುದರ ಸುತ್ತ ಕತೆ ನಡೆಯುತ್ತದೆ.

 

ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಕಾರು ಪ್ರಯಾಣ ಮಾಡುವುದರಿಂದ ಈ ಪ್ರಯಾಣದಲ್ಲಿ ಅಮೇರಿಕಾದ ಜೀವನ ಶೈಲಿ, ಗ್ರಾಂಡ್‌ ಕ್ಯಾನಸನ್‌, ಡೆತ್‌ ವ್ಯಾಲಿ, ಜಿಯಾನ್‌ ಸೇರಿದಂತೆ ಸಾಕಷ್ಟು ರಮಣೀಯ ದೃಶ್ಯಗಳ ಸಹ ಪ್ರೇಕ್ಷಕರಿಗೆ ಕಾಣುತ್ತದೆ.

 

ಈ ಚಿತ್ರವನ್ನು ಸುಮನ್‌ ನಗರಕರ್‌ ಪ್ರೊಡಕ್ಷನ್‌ ಮತ್ತು ಯುಗ ಕ್ರಿಯೇಷನ್ಸ್‌ ಒಟ್ಟಿಗೆ ಸೇರಿ ನಿರ್ಮಾಣ ಮಾಡಿದೆ. ಸುಜಯ್‌ ರಾಮಯ್ಯ ಎಂಬುವವರು ನಿರ್ದೇಶನ ಮಾಡಿದ್ದಾರೆ.

 

ಸುಮನ್‌ ನಗರ್‌ಕರ್‌, ಮಾಹಿ ಹಿರೇ ಮಠ, ರೇ ತೊಸ್ತಾಡೋ, ಸನ್ನಿ ಮೋಜ, ಪ್ರಕೃತಿ ಕಶ್ಯಪ್‌ ನಟಿಸಿದ್ದಾರೆ. ಲೂಸಿಯಾ ಖ್ಯಾತಿ ಪೂರ್ಣಚಂದ್ರ ತೇಜಸ್ವಿ ಇದಕ್ಕೆ ಸಂಗೀತ ನೀಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೇ ಅಥವಾ ಜೂನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದಾರೆ.

ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಇದ್ದ ಸುಮನ್‌ ನಗರ್‌ಕರ್‌ ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ.

Rate this item
(0 votes)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top