DKD Gif

Shatayu

adweb

Raambo 2 gIF

"ಮಿ.LLB" ಇದೇ 16 ರಂದು ಬಿಡುಗಡೆ

 

ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಮಿಸ್ಟರ್ ಎಲ್.ಎಲ್.ಬಿ. ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪ್ರೇಮ್ ಅಭಿನಯದ ಗುಣವಂತ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ರಘುವರ್ಧನ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ. ಫೆಬ್ರವರಿ 16 ರಂದು ಸುಮಾರು 70 ರಿಂದ 80 ಥಿಯೇಟರುಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರದ ಬಿಡುಗಡೆಯ ಕುರಿತಂತೆ ವಿವರಗಳನ್ನು ಹಂಚಿಕೊಳ್ಳಲು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಟಿಯನ್ನು ಆಯೋಜಿಸಿತ್ತು.

ನಿರ್ದೇಶಕ ರಘುವರ್ಧನ್ ಮಾತನಾಡುತ್ತ ಈ ತಂಡದಲ್ಲಿ ನಾನೊಬ್ಬ ಹಳಬನಾಗಿದ್ದರೂ ಉಳಿದವರೆಲ್ಲ ಹೊಸಬರು. ಇಷ್ಟು ದಿನ ನಿರ್ದೇಶನ ಮಾಡಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. 2 ಜನರೇಶನ್‍ನಲ್ಲಿ ನಡೆಯುವ ಕಥೆಯಿದು ಎಂದು ಹೇಳಿದರು. ನಾಯಕ ಶಿಶಿರ್ ಮಾತನಾಡುತ್ತ ಸೀರಿಯಲ್ ಮೂಲಕವೇ ನಾನು ಚಿತ್ರರಂಗಕ್ಕೆ ಬಂದೆ. ಒಬ್ಬ ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಏನೇನು ಬೇಕೋ ಅದೆಲ್ಲ ಈ ಚಿತ್ರದಲ್ಲಿದೆ. ಒಬಬ್ ಗೌಡನ ಮಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ನಾಯಕಿ ಲೇಖಾಚಂದ್ರ ಮಾತನಾಡಿ ತುಂಬಾ ಕ್ಯೂಟ್ ಆಗಿರುವಂಥ ಹಾಗೂ ನಾಯಕನಿಗೆ ಯಾವಾಗಲೂ ಕ್ವಾಟ್ಲೆ ಕೊಡುವಂಥ ಪಾತ್ರ ಎಂದು ತನ್ನ ಪಾತ್ರವನ್ನು ವಿವರಿಸಿದರು. ಉಳಿದಂತೆ ನಾರಾಯಣಸ್ವಾಮಿ, ಕೆಂಪೇಗೌಡ, ಹಾಗೂ ಸುಜಯ್ ಹೆಗಡೆ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.

ಮಂಜು ಚರಣ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರತಿ ಹಾಡುಗಳು ವಿಶೇಷತೆಯಿಂದ ಕೂಡಿವೆ. ಬಾಂಬೆ ಬೆಡಗಿಯೊಬ್ಬಳ ಅಭಿನಯದಲ್ಲಿ ಮೂಡಿಬಂದಿರುವ ಐಟಮ್ ಹಾಡೊಂದರಲ್ಲಿ ಉಪಹಾರಗಳ ಬಗ್ಗೆಯೇ ಉಲ್ಲೇಖಿಸಲಾಗಿದೆ. ಇಡ್ಲಿ ವಡಾ ಸಾಂಬಾರ್, ಬೆಂಗಳೂರು ಮಂಗಳೂರು ನಂದೇನೇ ದರ್ಬಾರು ಎಂಬ ಈ ಹಾಡು ಎಲ್ಲಾ ಕಡೆ ವೈರಲ್ ಆಗಿದೆ. ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ, ಪ್ರೇಮದ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ನವಿರಾದ ಹಾಸ್ಯವನ್ನು ಕೂಡ ಹೇಳಲಾಗಿದೆ.

ಈ ಚಿತ್ರಕ್ಕೆ ಸುರೇಶ್ ಬಾಬು ಅವರ ಛಾಯಾಗ್ರಹಣ, ರಾಜು ಬೆಳಗೆರೆ ಅವರ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಅವರ ಸಂಕಲನ, ಗೌಸ್‍ಪೀರ್, ಮಂಜುಚರಣ್ ಅವರ ಸಾಹಿತ್ಯ, ಕಲೈ ಮಾಸ್ಟರ್, ತ್ರಿಭುವನ್ ಅವರ ನೃತ್ಯ ನಿರ್ದೇಶನ ಹಾಗೂ ಪ್ರಭು ಅವರ ಕಲಾನಿರ್ದೇಶನವಿದೆ. ಶಿಶಿರ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ್ರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತಾ ಆಚಾರ್ಯ, ನಾರಾಯಣಸ್ವಾಮಿ, ಡೈಮಂಡ್ ರಾಜಣ್ಣ, ಡಾ|| ಸೋಮಶೇಖರ್, ರಾಮಣ್ಣ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನಟಿಸಿದ್ದಾರೆ.

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top