Raambo 2 gIF

rlr gIF rELEASE

adweb

anigif seizer

ತಂದೆ ತಾಯಿಗಳ ಆಸೆಗಾಗಿ 'ಇದಂ ಪ್ರೇಮಂ ಜೀವನಂ'

ಜಗತ್ತಿನಲ್ಲೇ ತಂದೆ ತಾಯಿ ಪ್ರೀತಿಗಿಂತಲೂ ಮುಖ್ಯವಾದದ್ದು ಯಾವುದು ಇಲ್ಲ ಎಂಬುದನ್ನು ನಮ್ಮ ಯುವಕರಿಗೆ ತೋರಿಸಲು ಇದಂ ಪ್ರೇಮಂ ಜೀವನಂ ಎಂಬ ಚಿತ್ರ ಬರುತ್ತಿದೆ. ಸಂಪೂರ್ಣವಾಗಿ ಹೊಸಬರಿಂದಲೇ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಘವಾಂಕ ಪ್ರಭು ಎಂಬುವವರು ನಿರ್ದೇಶನ ಮಾಡಿದ್ದಾರೆ.

ಇವರ ಹೊಸ ರೀತಿಯ ಪ್ರಯತ್ನಕ್ಕೆ ಕೆಆರ್‌ಜಿ ಸ್ಟೂಡಿಯೋಸ್‌ನ ಕಾರ್ತಿಕ್‌ ಗೌಡ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಹಿಂದೆ ಗಣಿತ ಉಪನ್ಯಾಸಕರಾಗಿದ್ದ ರಾಘವಾಂಕ ಪ್ರಭು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ, ತಂದೆ-ತಾಯಿ ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. ಅವರಿಗಾಗಿ ಮಕ್ಕಳು ಏನು ಮಾಡುತ್ತಾರೆ ಎಂಬುದಕ್ಕೆ ಸ್ವಲ್ಪ ಕಮರ್ಷಿಯಲ್‌ ಟಚ್‌ ನೀಡಿ ಚಿತ್ರ ಮಾಡಿದ್ದಾರಂತೆ ನಿರ್ದೇಶಕ ರಾಘವಾಂಕ ಪ್ರಭು.

ಈ ಚಿತ್ರದಲ್ಲಿ ನಾಯಕ-ನಾಯಕಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕಥೆ ಎಂಜಿನಿಯರಿಂಗ್‌ ಕೊನೆ ಸೆಮಿಸ್ಟರ್‌ನಿಂದ ಆರಂಭವಾಗುತ್ತದೆ. ತಂದೆ ತಾಯಿ ಆಸೆ ಪೂರೈಸುವ ಸಲುವಾಗಿ ತಮ್ಮ ಪ್ರೀತಿ ತ್ಯಾಗ ಮಾಡಲು ಸಿದ್ಧರಾಗುವ ಕಥೆ ಇದರಲ್ಲಿದೆ .

ಕೆ ಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಬರೀ ಟ್ರೇಲರ್‌ ನೋಡಿ ಈ ಚಿತ್ರವನ್ನು ವಿತರಣೆ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರಂತೆ.

ಚಿತ್ರದಲ್ಲಿ ತಂದೆ ತಾಯಿಯಾಗಿ ಅವಿನಾಶ್‌ - ಮಾಳವಿಕಾ ನಟಿಸಿದ್ದಾರೆ. ಸನತ್‌ ಸನ್ನಿ, ಶನಾಯ ಕಾತ್ವೆ ಎಂಬ ಹೊಸ ಪ್ರತಿಭೆಗಳು ನಾಯಕ -ನಾಯಕಿ. ಈ ಚಿತ್ರವನ್ನು ರಿಯೋನೊ ಪ್ರೋಡಕ್ಷನ್‌ ಹೌಸ್‌ ನಿರ್ಮಿಸಿದ್ದು, ಇದು ಗೋಕುಲ್‌ ಎನ್‌. ಕೆ, ನವೀನ್‌ ಕುಮಾರ್‌ ಜೆ.ಪಿ, ರಾಘವಂಕ ಪ್ರಭು ಸೇರಿ ಸ್ಥಾಪಿಸಿರುವ ಸಂಸ್ಥೆ. ಚಿತ್ರದ ಟ್ರೇಲರ್‌ನ್ನು ಜನವರಿ 1ರಂದು ಬಿಡುಗಡೆಯಾಗಿತ್ತು.

ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಬೇಸಿಕಲ್‌, ನವೀನ್‌ ಪಂಚಾಕ್ಷರಿ ಎಂಬುವವರು ಸಿನಿಮಾಟೋಗ್ರಫಿ ಮಾಡಿದ್ದಾರೆ.

'ನನಗೆ ಸಿನಿಮಾ ಅಂದ್ರೆ ಬಹಳ ಇಷ್ಟ. ಇವತ್ತಿನ ಜನರೇಶನ್‌ಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದರಂತೆ ಇದಂ ಪ್ರೇಮಂ ಜೀವನಂ ಚಿತ್ರ ಮಾಡಿದ್ದೇನೆ. ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸಿನಿಮಾ ತಂಡ.

Rate this item
(0 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top