IB anigif

Ayugya Gif

adweb

udgharsha

ಡೆತ್‌ ಮೆಟಲ್‌ ಮ್ಯೂಸಿಕ್‌ ನ 6 ನೇ ಮೈಲಿ

 

ಸಂಚಾರಿ ವಿಜಯ್‌ ನಟನೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ 6 ನೇ ಮೈಲಿಯಲ್ಲಿ ಒಂದೇ ಒಂದು ಹಾಡಿದ್ದು ಅದಕ್ಕೆ ಗ್ರ್ಯಾಮಿ ಅವಾರ್ಡ್‌ ಪುರಸ್ಕೃತರು ಡೆತ್‌ಮೆಟಲ್‌ ಮಾದರಿಯ ಸಂಗೀತ ನೀಡಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ.ಇತ್ತೀಚೆಗೆ ಈ ಹಾಡಿನ್ನು ಚಿತ್ರತಂಡ ಬಿಡುಗಡೆ ಮಾಡಿತು.

 

ಈ ಚಿತ್ರದ ಕಥೆ ಬರೆಯುವಾಗ ಸಿನಿಮಾಗೆ ಹಾಡಿನ ಅಗತ್ಯ ಇರಲಿಲ್ಲ ಎಂದುಕೊಂಡಿದ್ದರು ನಿರ್ದೇಶಕ ಸೀನಿ. ಆದರೆ ಸಂಗಿತ ನಿರ್ದೇಶಕ ಸಾಯಿ ಕಿರಣ್‌ ಚಿತ್ರದಲ್ಲಿ ಡೆತ್‌ ಮೆಟಲ್‌ ಸಂಗೀತ ಇರುವ ಹಾಡೊಂದು ಇದ್ದರೆ ಚೆಂದ. ಕನ್ನಡದಲ್ಲಿ ಈವರೆಗೂ ಡೆತ್‌ಮೆಟಲ್‌ ಮ್ಯೂಸಿಕ್‌ ಬಂದಿಲ್ಲ ಎಂದು ಹೇಳಿದರಂತೆ. ಆಗ ನಿರ್ದೇಶಕ ಸೀನಿ ಕೂಡ ಈ ಮೂಲಕ ನಿರ್ಮಾಪಕ ಶೈಲೇಶ್‌ಕುಮಾರ್‌ಗೆ ಒಳ್ಳೆ ಗಿಫ್ಟ್‌ ಕೊಡೊಣ ಎಂದು ನಿರ್ಧಿರಿಸಿದ್ದಾರೆ. ಆಗ ಹುಟ್ಟಕೊಂಡಿದ್ದೆ '6 ನೇ ಮೈಲಿಯ ಟೈಟಲ್‌ ಟ್ರ್ಯಾಕ್‌'. ಈ ಹಾಡನ್ನು ಸಾಯಿಕಿರಣ್ ಕಂಪೋಸ್‌ ಮಾಡಿದ್ದಾರೆ. ಇವರ ಕಂಪೋಸಿಂಗ್‌ ಗೆ ಸೌಂಡ್‌ ಎಂಜಿನಿಯರ್‌ ಮತ್ತು ಮಾಸ್ಟರಿಂಗ್‌ ಎಂಜಿನಿಯರ್‌ ಕೆಲಸ ಮಾಡಿರುವ ಇಬ್ಬರೂ ಗ್ರ್ಯಾಮಿ ಅವಾರ್ಡ್‌ ವಿನ್ನರ್‌ ಆಗಿದ್ದಾರೆ.

 

ಈ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ವಸಿಷ್ಠ ಸಿಂಹ ಧ್ವನಿ ಈ ಹಾಡಿಗೆ ಸೂಟ್‌ ಆಗುತ್ತದೆ ಎಂಬ ಕಾರಣಕ್ಕೆ ಅವರ ಕೈಯಲ್ಲೇ ಹಾಡಿಸಿದ್ದಾರೆ. ಆರ್‌ಜೆ ನೇತ್ರಾ, ಸುದರ್ಶನ್‌, ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನ್ಯೂರೋ ಸರ್ಜನ್‌ ಡಾ. ಶೈಲೇಶ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ.

Rate this item
(0 votes)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top