chamak running success

anigif

adweb

raju

ಆರ್ಯ ಅವರ ಫಸ್ಟ್ ಲುಕ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ

 

ಆರ್ಯ ಅವರ ಮೊದಲ ಕನ್ನಡ ಸಿನಿಮಾ 'ರಾಜರಥ'. ಇದರಲ್ಲಿ ಅವರು 'ವಿಶ್ವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಫಸ್ಟ್ ಲುಕ್ ಸಂಚಲನವನ್ನೇ ಸೃಷ್ಠಿಸಿತು. ಚಿತ್ರದಲ್ಲಿನ ಅವರ ಲುಕ್ ಕಿಚ್ಚ ಸುದೀಪ್ ರವರಿಂದ ಸ್ಫೂರ್ತಿಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

 

ಕಿಚ್ಚ ಸುದೀಪ್ ಅವರು ಅನೂಪ್ ಮತ್ತು ನಿರೂಪ್ ತಂದೆ ಸುಧಾಕರ್ ಭಂಡಾರಿ ಅವರ ಟಿವಿ ಧಾರಾವಾಹಿ ಪ್ರೇಮದ ಕಾದಂಬರಿಯಲ್ಲಿ 90ರ ದಶಕದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಸುದೀಪ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಕಥೆಗಳನ್ನು ಅನೂಪ್ ಹಾಗು ನಿರೂಪ್ ಚರ್ಚಿಸುತ್ತಿದ್ದರು. ತಮ್ಮ ಎಂಜಿನಿಯರಿಂಗ್ ದಿನಗಳಲ್ಲಿ ಅನೂಪ್ ಅವರು "ಯೋಧಾ" ಎಂಬ ಶೀರ್ಷಿಕೆಯಡಿ ಒಂದು ಸ್ಕ್ರಿಪ್ಟ್ ತಯಾರಿಸಿ , ಸುದೀಪ್ ಅವರು ಪೋಲೀಸ್ ಪಾತ್ರ ನಿಭಾಯಿಸಿದರೆ ಚೆನ್ನಾಗಿ ಮೂಡಿ ಬರುತ್ತದೆ ಎಂಬ ಆಲೋಚನೆ ಅನೂಪ್ ಅವರಿಗೆ ತಮ್ಮೆ ಎಂಜಿನಿಯರಿಂಗ್ ದಿನಗಳಲ್ಲಿಯೇ ಬಂದಿತ್ತು.

 

2010 ರಲ್ಲಿ ಅನೂಪ್, 'ವರ್ಡ್ಸ್' ಎಂಬ ಪ್ರಶಸ್ತಿ ಗೆದ್ದ ಕಿರುಚಿತ್ರ ನಿರ್ದೇಶಿಸಿದಾಗ, ಪತ್ರಿಕಾಗೋಷ್ಠಿಗೆ ಅತಿಥಿಯಾಗಿ ಬಂದ ಸುದೀಪ್ ರಿಂದ ಪ್ರಶಂಸೆ ಗಳಿಸಿದ್ದರು. ಆ ಸಮಯದಲ್ಲಿ ಅನೂಪ್ 'ರಾಜರಥ'ದ ಡ್ರಾಫ್ಟ್ ಮಾಡುತ್ತಿದ್ದರು. ಸುದೀಪ್ ಅವರ ವೇಷಭೂಷಣ, ನೀಲಿ ಕುರ್ತಾ, ಜೀನ್ಸ್ ಮತ್ತು ಸ್ಯಾಂಡಲ್ಸ್ ಗಳು ಕೂಡಲೇ ಅನೂಪ್ ಗೆ ಇಷ್ಟವಾಗಿ, "ಕಥೆಯಲ್ಲಿ ಬರುವ ವಿಶ್ವ ಪತ್ರದಂತೆಯೇ ಇದೆಯಲ್ಲ ಎಂದನಿಸಿತಂತೆ!". 'ರಾಜರಥ'ದ ಕೆಲಸ ಶುರುವಾದಂತೆ ವಸ್ತ್ರ ವಿನ್ಯಾಸಕರಾದ ಪತ್ನಿ ನೀತಾ ಶೆಟ್ಟಿಗೆ ಇದೇ ಸಲಹೆ ನೀಡಿದರು, ಅದನ್ನೇ ಕಾರ್ಯರೂಪಕ್ಕೂ ತರಲಾಯಿತು.

 

ಆರ್ಯರ ಸಹಾಯಕರು ತಮ್ಮ ಯಜಮಾನರ ವೇಷಭೂಷಣವನ್ನು ತುಂಬಾ ಇಷ್ಟಪಟ್ಟರು, ಅವರು 'ರಾಜರಥ'ದಲ್ಲಿ ಅತ್ಯುತ್ತಮವಾಗಿ ಕಾಣುತ್ತಾರೆ ಎಂದು ಅವರೆಲ್ಲರೂ ಭಾವಿಸಿದರು. ಆರ್ಯ ಪರದೆಯಮೇಲೆ ನಟಿಯರ ಜೊತೆ ಪ್ರಾಣಯರಾಜನ ಪಾತ್ರ ಮಾಡದೆ, ಈ ಚಿತ್ರದಲ್ಲಿ ಆರ್ಯ ವಿಭಿನ್ನ ಪಾತ್ರ ಮಾಡುವುದನ್ನು ನೋಡಿ ತುಂಬಾ ಖುಷಿಪಟ್ಟರು. ಆರ್ಯ, ಅವರು ಸಂಭಾಷಣೆಗಳನ್ನು ಜಿಮ್ನಲ್ಲಿ, ತಿನ್ನುವಾಗ, ಮಲಗಿದ್ದಾಗ, ಅಕ್ಷರಶಃ ಎಲ್ಲೆಡೆ ಅಭ್ಯಾಸ ಮಾಡುತಿದ್ದರು, ಇದನ್ನು ಕಂಡ ಆರ್ಯ ಅವರ ಸಹಾಯಕರು "ನಿರ್ದೇಶಕ ಅನುಪ್ ಭಂಡಾರಿ ಆರ್ಯರನ್ನು ಚಿತ್ರಹಿಂಸಿಸುತ್ತಿದ್ದಾರೆಂದು" ಹಾಸ್ಯದಿಂದ ಹೇಳುತ್ತಿದ್ದರು. ಕನ್ನಡ ಭಾಷೆ ಆರ್ಯರಿಗೆ ಹೊಸದಾಗಿದ್ದರಿಂದ ತಮ್ಮ ಸಾಲುಗಳನ್ನು ಹಾಗು ಅಭಿವ್ಯಕ್ತಿಗಳನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವುದಕ್ಕಾಗಿ ಆರ್ಯ ಸಂಪೂರ್ಣವಾಗಿ ಗಮನವಹಿಸುತ್ತಿದ್ದರು. ತೆಲುಗು ಅವರ ಮೊದಲ ಭಾಷೆ ಅಲ್ಲ ಹಾಗಾಗಿ ಅವರು ತೆಲುಗಿನ ಸಾಲುಗಳನ್ನು ಪೂರ್ವಾಭ್ಯಾಸ ಮಾಡಿಕೊಳ್ಳುತ್ತಿದ್ದರು.
ಆರ್ಯ ರಂಗಿತರಂಗದ ದೊಡ್ಡ ಅಭಿಮಾನಿಯಾದ ಕಾರಣ, ತಾನು ಪ್ರೀತಿಯಿಂದ ಒಪ್ಪಿಕೊಂಡಿರುವ ಪಾತ್ರಕ್ಕೆ ಅತ್ಯುತ್ತಮವಾದ ಅಭಿನಯ ನೀಡಬೇಕೆಂಬ ಉದ್ದೇಶ ಅವರದಾಗಿತ್ತು.

 

'ರಾಜರಥ' ತಂಡದ ಪ್ರಕಾರ ಕೆಲಸ ಮಾಡುವ ಅತ್ಯಂತ ವಿನಮ್ರ ವ್ಯಕ್ತಿಯಲ್ಲಿ ಆರ್ಯ ಸಹ ಒಬ್ಬರು. "ಅವರು ಸಮಯಕ್ಕೆ ಸೆಟ್ಟಿನಲ್ಲಿರುತ್ತಾರೆ ಮತ್ತು ಪ್ರಶ್ನಿಸದೆಯೇ ಪಾತ್ರಕ್ಕೆ ಅಗತ್ಯವಿರುವ ನಟನೆಯನ್ನು ಮಾಡುತ್ತಿದ್ದರು" ಎಂದು ನಿರ್ದೇಶಕ ಅನುಪ್ ಭಂಡಾರಿ ತಿಳಿಸಿದ್ದಾರೆ.

 

ರಾಜರಥ ರೋಮ್ಯಾನ್ಸ್, ಕಾಮಿಡಿ, ಸಂಗೀತದ ಅಂಶವಿರುವ ಚಿತ್ರ. ಅಜಯ್ ರೆಡ್ಡಿ, ಅಂಜು ವಲ್ಲಭನೆನಿ, ವಿಷು ದಕ್ಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ಅವರನ್ನು ಒಳಗೊಂಡಂತೆ ಜಾಲಿಹಿಟ್ಸ್ ಅವರು ಪ್ರಪಂಚದಾದ್ಯಂತ ಬಿಡುಗಡೆ ಮಾಡುತಿದ್ದಾರೆ.

Rate this item
(1 Vote)
Login to post comments

anigif sam

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top