nata

ttm

adweb

udgharsha

`ತಾರಕಾಸುರ' ಚಿತ್ರಕ್ಕೆ ಹಾಡಿನ ಚಿತ್ರೀಕರಣ :

 

ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸುತ್ತಿರುವ `ತಾರಾಕಾಸುರ` ಚಿತ್ರಕ್ಕಾಗಿ ಚೇತನ್ ಕುಮಾರ್ ಅವರು ಬರೆದಿರುವ `ಚಂದಮಾಮ ಕಥೆ ಕೇಳಿದ್ದೆ, ಲೈನು ಹಾಕೋರನ್ನ ನೋಡಿದ್ದೆ, ಲವ್ವು ಮಾಡೋರನ್ನ ಬೈತಿದ್ದೆ, ಈಗ ನಾನೇ ಲವ್ವಲ್ ಬಿದ್ದು ಮಕ್ಕರ್ ಆಗೋದೆ` ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಬೆಟ್ಟದಲ್ಲಿ ಮೂರುದಿನಗಳ ಕಾಲ ನಡೆದಿದೆ.

 

ಮಾನ್ವಿತ ಹರೀಶ್, ವೈಭವ್, ಕರಿಸುಬ್ಬು, ಎಂ.ಕೆ.ಮಠ ಅಭಿನಯಿಸಿದ ಈ ಹಾಡಿನ ಚಿತ್ರೀಕರಣದಲ್ಲಿ 500ಕ್ಕೂ ಹೆಚ್ಚು ಸಹ ಕಲಾವಿದರು, 200ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗವಹಿಸಿದ್ದರು. ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.

 

ಹಿಂದೆ `ರಥಾವರ` ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ `ತಾರಾಕಾಸುರ` ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

ವೈಭವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‍ನ ನಟ ಡ್ಯಾನಿ ಸ¥sóÁನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top