tarakaasura

ttm

adweb

udgharsha

ಸಿಕ್ಸ್ ಪ್ಯಾಕ್ ರಾಮನಾದ ದುನಿಯಾ ವಿಜಯ್ :

 
 ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಜಾನಿ ಜಾನಿ ಎಸ್ ಪಾಪಾ' ಸಿನಿಮಾದಲ್ಲಿ ದುನಿಯಾ ವಿಜಯ್ ರಾಮನಾಗಿದ್ದಾರೆ, ರಂಗಾಯಣ ರಘು ಹನುಮಂತನ ಅವತಾರವೆತ್ತಿದ್ದಾರೆ.
 
ಇದೇ 30ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್‌ ಸಿಕ್ಸ್ ಪ್ಯಾಕ್ ರಾಮನಾಗಿದ್ದಾರೆ. ಚಿತ್ರದಲ್ಲಿ ಬರುವ ಒಂದು ಸಣ್ಣ ದೃಶ್ಯದಲ್ಲಿ ವಿಜಯ್‌ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನವಮಿ ಹಬ್ಬದ ದಿನ ಈ ರಾಮನ ಅವತಾರದ ಟೀಸರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
 
 WhatsApp Image 2018 03 25 at 3.04.09 PM
ಈ ಹಿಂದೆ ಪ್ರೀತಮ್‌ ಗುಬ್ಬಿ ಮತ್ತು ದುನಿಯಾ ವಿಜಯ್‌ ಜತೆಯಾಗಿ 'ಜಾನಿ ಮೇರಾ ನಾಮ,ಪ್ರೀತಿ ಮೇರಾ ಕಾಮ್' ಮಾಡಿದ್ದರು. ಈಗ ಅದರ ಮುಂದುವರೆದ ಭಾಗವಾಗಿ 'ಜಾನಿ ಜಾನಿ ಎಸ್ ಪಾಪ' ಸಿನಿಮಾ ಮಾಡಿದ್ದಾರೆ . ಕಳೆದ ಬಾರಿಯಂತೆ ಈ ಬಾರಿಯೂ ಕಾಮಿಡಿ ಇಟ್ಟುಕೊಂಡು ಜನರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಲು ಬರುತ್ತಿದ್ದಾರಂತೆ.
 
ಈ ಸಿನಿಮಾದಲ್ಲಿ ರಾಮನ ಅವತಾರ ಯಾಕೆ ಬರುತ್ತದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಅಂತಾರೆ ನಿರ್ದೇಶಕ ಪ್ರೀತಂ ಗುಬ್ಬಿ.
'ಜಾನಿ....'ಯನ್ನು ದುನಿಯಾ ವಿಜಯ್‌ ಅವರು ತಮ್ಮ ಹೋಮ್‌ ಬ್ಯಾನರ್‌ ಆದ ದುನಿಯಾ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ.
#JohnnyJohnnyYesPapa #Cineloka #DuniyaVijay
Rate this item
(1 Vote)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top