nata

ttm

adweb

udgharsha

ಹೊಸ 'ನಂಜುಂಡಿ ಕಲ್ಯಾಣ'ದಲ್ಲಿ ಭರಪೂರ ಹಾಸ್ಯ

 

'ಮಡಮಕ್ಕಿ' ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಟ ತನುಷ್‌ ಈಗ 'ನಂಜುಂಡಿ ಕಲ್ಯಾಣ'ದ ಮೂಲಕ ಸ್ಯಾಂಡಲ್‌ವುಡ್‌ಗೆ ವಾಪಾಸ್‌ ಆಗಿದ್ದಾರೆ.

 

1989ರಲ್ಲಿ ತೆರೆ ಕಂಡು ದೊಡ್ಡ ಮಟ್ಟದ ಯಶಸ್ಸು ಕಂಡಿದ 'ನಂಜುಂಡಿ ಕಲ್ಯಾಣ' ಸಿನಿಮಾದ ಶೀರ್ಷಿಕೆಯು 28 ವರ್ಷಗಳ ಬಳಿಕ ಬಳಸಲಾಗುತ್ತಿದೆ.

 

 

ಈಗಿನ ನಂಜುಂಡಿ ಕಲ್ಯಾಣವನ್ನು ರಂಗಕರ್ಮಿ ನಟ ರಾಜೇಂದ್ರ ಕಾರಂತ್‌ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು, ಕ್ಲೈಮಾಕ್ಸ್‌ ಭಾಗದ 20 ನಿಮಿಷ ಪ್ರೇಕ್ಷಕರನ್ನು ಕಾಡಿ ಅವರಿಂದ ಕಣ್ಣುಗಳನ್ನು ಒದ್ದೆಯಾಗುವಂತೆ ಮಾಡುತ್ತದಂತೆ. ಹಠಮಾರಿ ತಾಯಿಯ ಮನಸ್ಸನ್ನು ಪರಿವರ್ತಿಸಿ ಪ್ರೀತಿಸಿದ ಹುಡುಗಿಯನ್ನು ಹೇಗೆ ಮದುವೆಯಾಗುತ್ತಾನೆ ಎಂಬುದು ಸಿನಿಮಾದ ಸ್ಟೋರಿ.

 

 

ತನುಷ್‌ ನಾಯಕನಾಗಿ ಕಾಣಿಸಿಕೊಂಡಿದ್ದರೆ ಶ್ರಾವ್ಯ ನಾಯಕಿ. ಮಂಜುನಾಥ ಹೆಗಡೆ, ಪದ್ಮಜಾ ರಾವ್‌ ಮತ್ತು ಕುರಿ ಪ್ರತಾಪ್‌ ತಾರಾಗಣದಲ್ಲಿ ಇದ್ದಾರೆ. ಕಾಮಿಡಿ ದೃಶ್ಯಗಳನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು . ಮುಂದಿನ ವಾರ(ಏಪ್ರಿಲ್ 6) ಈ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ರಸದೌತಣ ನೀಡುವುದು ಖಂಡಿತಾ ಎನ್ನುತ್ತದೆ ಚಿತ್ರತಂಡ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top