DKD Gif

6ne maili release gif

adweb

Raambo 2 gIF

ನಂಜುಂಡಿ ಕಲ್ಯಾಣದಲ್ಲಿ ಮದುವೆಯ ಸರ್ಕಸ್‌

ರಾಘವೇಂದ್ರ ರಾಜ್‌ಕುಮಾರ್‌ ನಾಯಕರಾಗಿದ್ದ ಹಳೇ ನಂಜುಂಡಿ ಕಲ್ಯಾಣದಲ್ಲಿ ಮದುವೆಯ ಬಗೆಗಿನ ಸರ್ಕಸ್‌ ನಡೆಯುತ್ತದೆ, ಈ ವಾರ ಬಿಡುಗಡೆಯಾಗುತ್ತಿರುವ ನಂಜುಂಡಿ ಕಲ್ಯಾಣದಲ್ಲಿಯೂ ಮದುವೆ ಬಗೆಗಿನ ಸರ್ಕಸ್‌ ನಡೆಯುತ್ತದೆ.

 

ತಾನು ಇಷ್ಟಪಟ್ಟವರ ಜತೆ ಮದುವೆಯಾಗಲು ಸಿನಿಮಾದ ನಾಯಕ ಮಾಡುವ ನಾನಾ ವಿಧದ ಸರ್ಕಸ್ಸೇ ಈ ಚಿತ್ರದ ಕಥೆ. ಬಹಳ ಗಂಭೀರ ವಿಷಯವನ್ನು ಈ ಚಿತ್ರದಲ್ಲಿ ಹಾಸ್ಯದೊಂದಿಗೆ ಹೇಳಲಾಗಿದೆ. ಈ ಕಾರಣಕ್ಕಾಗಿ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ.

 

 ಸಲಿಂಗಿಗಳು ಮದುವೆಯಾಗುವುದು ನಮ್ಮ ದೇಶದಲ್ಲಿ ನಡೆಯುವುದು ಬಹಳ ಕಡಿಮೆ. ಆದರೆ ವಿದೇಶದಲ್ಲಿ ಇದೆಲ್ಲ ಕಾಮನ್‌, ಹೀಗೆ ವಿದೇಶದಲ್ಲಿ ಸಲಿಂಗಿಯನ್ನು ಮದುವೆಯಾಗಿ ಬಂದು ನಮ್ಮ ದೇಶದಲ್ಲಿ ಏನು ಕಷ್ಟ ಪಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿನಿರ್ದೇಶಕರು ಹೇಳಿದ್ದಾರೆ. ನಿರ್ದೇಶಕರಿಗೆ ಈ ಸಿನಿಮಾವನ್ನು ನಮ್ಮ ಜನ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲವಾಗಿದೆಯಂತೆ. ಈ ಚಿತ್ರದಲ್ಲಿ ಎಲ್ಲ ಕಮರ್ಷಿಯಲ್‌ ಅಂಶಗಳು ಇವೆ.

  

ಮಡಮಕ್ಕಿ ಖ್ಯಾತಿಯ ತನುಷ್‌ ಶಿವಣ್ಣ ಚಿತ್ರದ ನಾಯಕ. ಮೊದಲ ಬಾರಿಗೆ ಅವರು ಹೊಸರೀತಿಯ ಪಾತ್ರವನ್ನು ಮಾಡಿದ್ದಾರೆ. ಶ್ರವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕುರಿ ಪ್ರತಾಪ್‌ ಗೇ ಪಾತ್ರ ನಿರ್ವಹಿಸಿದ್ದಾರೆ. 

Rate this item
(0 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top