IB anigif

Ayugya Gif

adweb

udgharsha

'ರುಸ್ತುಂ'ನಲ್ಲಿ ಶಿವಣ್ಣನಿಗೆ ಮೂವರು ವಿಲನ್ಸ್

ಡಾ. ಶಿವಣ್ಣ ಅಭಿನಯದ,ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ "ರುಸ್ತುಂ" ಸಿನಿಮಾ ಅಣ್ಣಾವ್ರ ಹುಟ್ಟು ಹಬ್ಬದಂದು ಸೆಟ್ಟೇರಲಿದ್ದು, ಈ ಸಿನಿಮಾದಲ್ಲಿ ಹರೀಶ್‌ ಉತ್ತಮನ್‌, ಮಹೇಂದ್ರನ್‌, ಅರ್ಜುನ್‌ಗೌಡ ಶಿವಣ್ಣನ ಎದುರು ನಟಿಸಲಿದ್ದಾರೆ.
.
ಟಗರು ಚಿತ್ರದ ನಂತರ ಶಿವರಾಜ್‌ಕುಮಾರ್‌ ರುಸ್ತುಂನಲ್ಲಿ ಮತ್ತೊಮ್ಮೆ ಖಡಕ್‌ ಪೊಲೀಸ್‌ ಆಫೀಸರ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರುಸ್ತುಂಗೆ ಸುನಿಲ್‌ ಶೆಟ್ಟಿ, ಮನೋಜ್‌ ಬಾಜಪೇಯಿ ಸೇರಿದಂತೆ ಬಾಲಿವುಡ್‌ನ ನಟರ ಖಳನಟರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಡೇಟ್ಸ್‌ ಸಮಸ್ಯೆ ಬಂದಿದ್ದು, ನಿರ್ದೇಶಕರು ಕಡೆಗೆ ಮಹೇಂದ್ರನ್‌ ಮತ್ತು ಹರೀಶ್‌ ಉತ್ತಮನ್‌ ಕಡೆ ವಾಲಿದ್ದಾರೆ.
.
ಹರೀಶ್‌ ಉತ್ತಮನ್‌ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಮಹೇಂದ್ರನ್‌ ನಿರ್ದೇಶಕ, ಬರಹಗಾರ ನಟರಾಗಿ ತಮಿಳು ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅರ್ಜುನ್‌ ಗೌಡಗೆ ಇದು ಮೊದಲ ಚಿತ್ರವಾಗಿದೆ.
.
ಜಯಣ್ಣ ಬೋಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಏ.24ಕ್ಕೆ ರುಸ್ತುಂ ಸಿನಿಮಾದ ಫರ್ಸ್ಟ್ ಲುಕ್ ಪೋಸ್ಟರ್‌ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತದೆ.
.
#Rustum #Cineloka #DrShivanna
Rate this item
(1 Vote)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top