IB anigif

Ayugya Gif

adweb

udgharsha

ಪೊರ್ಕಿಯೊಬ್ಬ 'ಕವಿ'ಯಾದ ಕಥೆ

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ. ಅದನ್ನು ಪೋಷಿಸಿದರೆ, ಆ ವ್ಯಕ್ತಿ ಜಗತ್ತನ್ನೇ ಬೆಳಗುವ ವ್ಯಕ್ತಿಯಾಗುತ್ತಾನೆ. ಒಬ್ಬ ಪೊರ್ಕಿ ಯುವಕ ಹೇಗೆ ಕವಿಯಾದ ಎಂಬ ಅಂಶವನ್ನಿಟ್ಟುಕೊಂಡು ನಿರ್ಮಿಸಲಾದ ಚಿತ್ರದ ಹೆಸರು ಕವಿ. ಈವರೆಗೆ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎಂ.ಎಸ್. ತ್ಯಾಗರಾಜ್ ಮೊದಲ ಬಾರಿಗೆ 

ಆ್ಯಕ್ಷನ್ ಕಟ್ ಹೇಳುವ ಮೂಲಕ ಕವಿಯ ಸಾರಥಿಯಾಗಿದ್ದಾರೆ. ಪುನೀತ್ ಗೌಡ ನಿರ್ಮಾಪಕ ಕೂಡ ಹೌದು.


ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನಡೆಯಿತು. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಸಾಹಿತ್ಯವನ್ನು ಪ್ರೇಮ್ ಖುಷಿ, ಮಧುಸೂದನ್ ಹಾಗೂ ತ್ಯಾಗರಾಜ್ ರಚಿಸಿದ್ದು, ಸಂಗೀತ ನಿರ್ದೇಶನವನ್ನು ನಿರ್ದೇಶಕರೇ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಮಾತನಾಡುತ್ತಾ, ಈವರೆಗೆ ಸಂಗೀತ ನಿರ್ದೇಶಕನಾಗಿದ್ದು, ನಾನು ಈಗ ಸಿನಿಮಾ ನಿರ್ದೇಶನಕ್ಕೆ ಕಾಲಿಟ್ಟಿದ್ದೇನೆ. ಕವಿ ಎಂದ ಕೂಡಲೇ ಇದೊಂದು ಸಾಹಿತ್ಯ ಕಥೆ ಎಂದುಕೊಳ್ಳಬೇಕಿಲ್ಲ. ಕಮರ್ಷಿಯಲ್ ಅಂಶಗಳಿರುವ ಎಂಟರ್‍ಟೈನ್‍ಮೆಂಟ್ ಪ್ರತಿ ಮನುಷ್ಯನೂ ಜೀವನದಲ್ಲಿ ಕವಿಯಾಗಿರುತ್ತಾನೆ. ಯಾರ ಹಂಗೂ ಬೇಡ ನನಗೆ ನಾನೇ ಎಲ್ಲಾ ಎಂಬ ಸ್ವಾರ್ಥದಿಂದ ಬದುಕುತ್ತಿದ್ದ ನಾಯಕ ಒಂದು ಹಂತದಲ್ಲಿ ಎಲ್ಲರನ್ನೂ ಕಳೆದುಕೊಳ್ಳುತ್ತಾನೆ. ಆಗ ಆತನಿಗೆ ನನ್ನವರು ಬೇಕು ಅನಿಸುತ್ತದೆ. ಅವನಿಗೆ ತಾನು ಬಯಸಿದ ನೆಮ್ಮದಿ ಸಿಗುತ್ತಾ, ಇಲ್ಲವಾ ಎನ್ನುವುದೇ ಕವಿ ಚಿತ್ರಕಥೆ. ನನಗೆ ನನ್ನ ಗೆಳೆಯ ಪ್ರೇಮ್ ಖುಷಿ ಕಡೆಯಿಂದ ನಿರ್ಮಾಪಕರ ಪರಿಚಯವಾಯಿತು ಎಂದು ಹೇಳಿಕೊಂಡರು.


ನಂತರ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಪುನೀತ್ ಗೌಡ ಮಾತನಾಡುತ್ತಾ, ಮೋಕ್ಷ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಚಿಕ್ಕವನಾಗಿದ್ದಾಗಿನಿಂದಲೂ ತಾನೊಬ್ಬ ನಿರ್ಮಾಪಕನಾಗಿ ಒಳ್ಳೆ ಸಿನಿಮಾ ಮಾಡಬೇಕು. ಕಲಾವಿದನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿತ್ತು. ಒಬ್ಬ ಬೇಜವಾಬ್ದಾರಿ ಮನುಷ್ಯ ಹೇಗೆ ಕವಿಯಾಗುತ್ತಾನೆ ಎನ್ನುವುದೇ ನನ್ನ ಪಾತ್ರ. ನಂತರ ಚಿತ್ರದ ನಾಯಕಿ ಶೋಬಿತ ಶಿವಣ್ಣ ಮಾತನಾಡಿ ಹಂಸ ಎಂಬ ಮುಗ್ದ ಹಳ್ಳಿ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಬ್ಬ ಕವಿಯನ್ನು ಮದುವೆಯಾಗಬೇಕು ಎಂದುಕೊಂಡಿರುತ್ತೇನೆ. ನನ್ನ ಕುಟುಂಬದವರಿಗೂ ಅದೇ ಆಸೆ ಇರುತ್ತದೆ. ಆದರೆ ಒಬ್ಬ ಪೊರ್ಕಿಯನ್ನು ಕವಿ ಎಂದು ನಂಬಿ ಹೇಗೆ ಮೋಸ ಹೋಗುತ್ತೇನೆ. ಆತನಲ್ಲಿರುವ ಕವಿ ಹೊರಬಂದ ಮೇಲೆ ಏನಾಯಿತು ಎಂದು ನನ್ನ ಪಾತ್ರದ ಕಥೆ ಎಂದು ಹೇಳಿದರು.


ಹಿರಿಯ ಕಲಾವಿದರಾದ ರಾಕ್ ಲೈನ್ ಸುಧಾಕರ್ ಹಾಗೂ ಎಂ.ಎಸ್. ಉಮೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಿರ್ಮಾಪಕರ ಸ್ನೇಹಿತರಾದ ದೇವರಾಜ್ ಮತ್ತು ಹನುಮೇಗೌಡ ಕೂಡ ಈ ಸಮಾರಂಭದಲ್ಲಿ ಹಾಜರಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದರು. ಅವಿನಾಶ್ ಅವರ ನೇತೃತ್ವದ ಅವೀಸ್ ಮ್ಯೂಜಿಕ್ ಮೂಲಕ ಈ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಆಡಿಯೋ ಕಂಪನಿಯ ಪರವಾಗಿ ದೀಪು ಅವಿನಾಶ್ ಆಗಮಿಸಿದ್ದರು. ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಮುಂದಿನ ತಿಂಗಳಲ್ಲಿ ತೆರೆಗೆ ಬರಲಿದೆ. ಶಾಂತಕುಮಾರ್ ಹಾಗೂ ಕಾರ್ತಿಕ್ ಶರ್ಮ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

Rate this item
(0 votes)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top