nata

ttm

adweb

udgharsha

ಇದೇ ತಿಂಗಳ 18 ರಂದು "ರಾಜ ಲವ್ಸ್ ರಾಧೆ" ರಾಜ್ಯಾದ್ಯಂತ ತೆರೆಗೆ

 
-----------
ಅಂದು ಕೊಂಡಂತೆಯೇ ಆಗಿದ್ದರೆ ರಾಜ ಲವ್ಸ್ ರಾಧೆ ಚಿತ್ರ 2 ತಿಂಗಳ ಹಿಂದೆಯೇ ರಿಲೀಸ್ ಆಗಬೇಕಾಗಿತ್ತು. ವಿಧಾನಸಭಾ ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿ ಇದೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳ 18 ರಂದು ರಾಜ ಲವ್ಸ್ ರಾಧೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಂಭಾಷಣೆ ನಂತರ ರಾಜಶೇಖರ್‍ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 2ನೇ ಚಿತ್ರವಿದು.
ಕೋಟಿಗೊಂದು ಲವ್ ಸ್ಟೋರಿ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಹೆಚ್.ಎಲ್.ರಾಜ್ ತಮ್ಮ 2ನೇ ಪ್ರಯತ್ನವಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
.
ಬಹಳ ದಿನಗಳ ನಂತರ ವಿಜಯರಾಘವೇಂದ್ರ ಈ ಚಿತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದಾರೆ. ಪಂಟ ಚಿತ್ರದ ನಾಯಕಿ ರಿತೀಕ್ಷಾ ಈ ಚಿತ್ರದಲ್ಲಿ ರಾಧಿಕಾ ಪ್ರೀತಿ ಆಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ತಿಕಾಗೋಷ್ಠಿ ಮೊನ್ನೆ ನಡೆಯಿತು. ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು.
.
ನಿರ್ದೇಶಕ ರಾಜಶೇಖರ್ ಮಾತನಾಡಿ ನಾವೆಲ್ಲ ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಬಂದಿದೆ. 18ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಇಲ್ಲಿ ನಾವೆಲ್ಲ ಸೇರಲು ಕಾರಣ ನಿರ್ಮಾಪಕರು. ಒಂದು ಹಂತದಲ್ಲಿ ನಾನು ವಾಪಸ್ ಹೋಗಬೇಕೆಂದುಕೊಂಡಾಗ ವಿಜಯ್ ಭರಮಸಾಗರ ಅವರೇ ಧೈರ್ಯ ತುಂಬಿದರು. ನಿರ್ಮಾಪಕರನ್ನು ಅವರೇ ಪರಿಚಯಿಸಿದರು. ಒಂದು ಸಿನಿಮಾನ ನಿರ್ಮಿಸುವುದಕ್ಕಿಂತ ಅದನ್ನು ಚಿತ್ರಮಂದಿರಗಳಲ್ಲಿ ನಿಲ್ಲಿಸುವುದು ಮುಖ್ಯ. ಆ ಸಾಮಥ್ರ್ಯ ಅವರಿಗಿತ್ತು.ಇನ್ನು ಚಿತ್ರದಲ್ಲಿ ವಿಜಯರಾಘವೇಂದ್ರ ಕಾಮಿಡಿ ವಿತ್ ಲವರ್ ಬಾಯ್ ಎರಡೂ ಥರದ ಪಾತ್ರಗಳನ್ನು ಮಾಡಿದ್ದಾರೆ. ರಾಧಿಕಾ ಪ್ರೀತಿ ಕೂಡ ಅದ್ಭುತವಾಗಿ ನಟಿಸಿದ್ದಾರೆ. ವಿಜಯಭರಮಸಾಗರ ಅವರು ಹ್ಯೂಮರಸ್ ಶೈಲಿಯ ಡೈಲಾಗ್‍ಗಳನ್ನು ಚೆನ್ನಾಗಿ ರಚಿಸಿದ್ದಾರೆ. ಚಿತ್ರದಲ್ಲಿರುವ 4 ಹಾಡುಗಳೂ 4 ಶೈಲಿಯಲ್ಲಿ ಮೂಡಿ ಬಂದಿದೆ. ಪವನ್, ತಬಲಾ ನಾಣಿ, ಡ್ಯಾನಿಯಲ್ ಕುಟ್ಟಪ್ಪ, ಕುರಿ ಪ್ರತಾಪ್, ಶೋಭ್‍ರಾಜ್ ಸೇರಿದಂತೆ ಬಹುತೇಕ ಕಲಾವಿದರು ಉತ್ತಮವಾದ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿಶಂಕರ್ ಈ ಹಿಂದೆ ಕಾಣಿಸಿರುವಂಥ ಹೊಸ ಕ್ಯಾರೆಕ್ಟರ್ ನಿಭಾಯಿಸಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಸುಮಾರು 65 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.
.
ನಾಯಕ ವಿಜಯರಾಘವೇಂದ್ರ ಮಾತನಾಡಿ ನಿರ್ಮಾಪಕರು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾನು ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ಮೆಕಾನಿಕ್ ಪಾತ್ರವನ್ನು ನಿರ್ವಹಿಸಿದ್ದೇನೆ. ಮಾಸ್ ಹ್ಯೂಮರಸ್ ರೋಲ್ ನಿರ್ದೇಶಕರು ಎಲ್ಲಾ ಪಾತ್ರಗಳನ್ನು ತುಂಬಾ ಚೆನ್ನಾಗಿ ಪ್ಲಾನ್ ಮಾಡಿದರು. ಸೊಬಗು ಸೊಬಗು ಹಾಗೂ ಊರು ಕೇರಿ ಹಾಡುಗಳು ತುಂಬಾ ಜನಪ್ರಿಯತೆಯಾಗಿದೆ. ವೀರ್ ಸಮರ್ ಅವರು ತುಂಬಾ ಸೊಗಸಾಗಿ ಹಾಡುಗಳನ್ನು ಮಾಡಿದ್ದಾರೆ. ಚುನಾವಣೆ ಟೆನ್‍ಷನ್ ಮುಗಿಸಿಕೊಂಡು ರಾಜ ಲವ್ಸ್ ರಾಧೆ ಒಂದು ಉತ್ತಮ ಚಿತ್ರವಾಗಿ ಆಯ್ಕೆಯಾಗುವುದು ಎಂದು ಹೇಳಿದರು.
.
ನಾಯಕಿ ರಾಧಿಕಾ ಪ್ರೀತಿ ಮಾತನಾಡಿ ಇದು ನನ್ನ ಎರಡನೇ ಚಿತ್ರ, ರಾಧಾ ಎಂಬ ರೇಡಿಯೋ ಜಾಕಿ ಪಾತ್ರವನ್ನು ಈ ಚಿತ್ರದಲ್ಲಿ ಉತ್ತಮವಾಗಿ ನಿರ್ವಹಿಸಿದ್ದೇನೆ ಇಡೀ ಸಿನಿಮಾ ಹಾಸ್ಯಮಯವಾಗಿ ಮೂಡಿಬಂದಿದೆ. ಚಿತ್ರದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು. ನಿರ್ಮಾಪಕ ಎಚ್.ಎಲ್.ಎನ್.ರಾಜ್ ಮಾತನಾಡಿ ಹಿಂದಿನ ಸಿನಿಮಾದ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದೇನೆ.
.
ಇದೇ 18 ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
.
#RajaLovesRadhe #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top