nata

ttm

adweb

udgharsha

ಲಾಸ್‌ ಏಂಜಲೀಸ್‌ ಚಿತ್ರೋತ್ಸವದಲ್ಲಿ 'ಎಡಕಲ್ಲು ಗುಡ್ಡದ ಮೇಲೆ' :

 
ಪುಟ್ಟಣ್ಣ ಕಣಗಲ್‌ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದ ಆ ಕಾಲಕ್ಕೆ ದೊಡ್ಡ ಹಿಟ್‌ ಆಗಿತ್ತು, ಈಗ ಅದೇ ಶೀರ್ಷಿಕೆ ಹೊತ್ತು ಮತ್ತೊಂದು ಹೊಸ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ವಿವಿನ್‌ ಸೂರ್ಯ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಎಡಕಲ್ಲು ಗುಡ್ಡ ಚಿತ್ರ ಖ್ಯಾತಿಯ ಚಂದ್ರಶೇಖರ್‌ ಸೇರಿದಂತೆ ಸಾಕಷ್ಟು ಮಂದಿ ಹಿರಿಯ ನಟ, ನಟಿಯರು ನಟಿಸಿದ್ದಾರೆ.
.
ವಿಶೇಷ ಎಂದರೆ ಈ ಚಿತ್ರ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಸದ್ಯ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಈ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದೆ.
.
ಮೂಲ ಸಿನಿಮಾದಲ್ಲಿ ನಟಿಸಿದ ಕಲಾವಿದರು ಕೂಡ ಈ ಚಿತ್ರದಲ್ಲಿ ಇದ್ದಾರೆ ಎನ್ನುವುದು ಇದರ ಮತ್ತೊಂದು ವಿಶೇಷತೆಯಾಗಿದೆ. ಭಾರತಿ ವಿಷ್ಣುವರ್ಧನ್‌, ಶ್ರೀನಾಥ್‌, ದತ್ತಣ್ಣ, ಚಂದ್ರಶೇಖರ್‌ ಮೂಗೂರು ಸುರೇಶ್‌, ಚಿದಾನಂದ್‌, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್‌ ಹೀಗೆ ದೊಡ್ಡ ತಾರಾಬಳಗವೇ ಇದೆ.
.
ಈ ಚಿತ್ರದಲ್ಲಿ ಎರಡು ಜನರೇಷನ್‌ ಕಥೆ ಹೇಳುತ್ತಿದ್ದಾರೆ ನಿರ್ದೇಶಕ ವಿವಿನ್‌ ಸೂರ್ಯ. ಜಿ ಪಿ ಪ್ರಕಾಶ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
.
#EdakalluGuddadamele #Cineloka

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top