nata

ttm

adweb

udgharsha

'ಸಿಗ್ನೇಚರ್ ' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ವಿರಾಟ್ ಪ್ರೊಡಕ್ಷನ್ಸ್ ಹಾಗೂ ಎಂ.ಎಂ.ಕೆ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಪೂರ್ಣಿಮಾ ಭಾಸ್ಕರ್ ತೆಕ್ಕೆಟ್ಟ ಅವರು ನಿರ್ಮಿಸುತ್ತಿರುವ `ಸಿಗ್ನೇಚರ್` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕುಂದಾಪುರ, ಮರವಂತೆ, ತೆಕ್ಕೆಟ್ಟ ಮುಂತಾದ ಕಡೆ ಚಿತ್ರಕ್ಕೆ ಹತ್ತು ದಿನಗಳ ಕಾಲ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಮಯೂರಿ, ರಂಜಿತ್, ಬೇಬಿ ಮಾನ್ಯ, ಬಚ್ಚನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು.


ಗುರು ಮದ್ಲೇಸರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ಜೀವನ್ ಗೌಡ ಛಾಯಾಗ್ರಹಣ, ವಿಶ್ವ ಸಂಕಲನ ಹಾಗೂ ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜೇಶ್ ಸಂಭಾಷಣೆ ಬರೆದಿದ್ದಾರೆ. ವಿ.ಮನೋಹರ್, ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ.


ರಂಜಿತ್, ಮಯೂರಿ, ಸುಧಾರಾಣಿ, ಬೇಬಿ.ಮಾನ್ಯ, ಸೂರ್ಯಕಿರಣ್, ಸುನೀಲ್ ಪುರಾಣೀಕ್, ಗಿರೀಶ್ ಜತ್ತಿ, ಪಚ್ಚಿ ಆತೂರು, ಬಚ್ಚನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top