DKD Gif

Shatayu

adweb

Raambo 2 gIF

ಮೇ.28 ರಿಂದ ಜೀ ಕನ್ನಡದಲ್ಲಿ 'ಕಮಲಿ' :

 
ಜೀಕನ್ನಡ ಕಳೆದ ಹನ್ನೆರಡು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದ್ದು, ಗುಣಮಟ್ಟದ ಮನರಂಜನೆಗೆ ಮನೆಮಾತಾಗಿದೆ. ಇದೀಗ ಮತ್ತೊಂದುಕಥೆಯೊಂದಿಗೆ ಮತ್ತಷ್ಟು ಮನರಂಜನೆ. ಜೀ ಕನ್ನಡ ವಾಹಿನಿಯಲ್ಲಿ ಇದೇ ಮೇ.28ರಿಂದ ಹೊಸ ಧಾರಾವಾಹಿ ಕಮಲಿ ಆರಂಭವಾಗುತ್ತಿದೆ.ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 7 ರಿಂದ 7.30ರವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಕನ್ನಡಕಿರುತೆರೆಯಲ್ಲಿಇದೇ ಮೊದಲು ಧಾರಾವಾಹಿಯೊಂದು ಕೊಡೈಕೆನಾಲ್‍ನಲ್ಲಿ ಚಿತ್ರೀಕರಣಗೊಂಡಿದೆ.
.
ಕಮಲಿಯ ಹಳ್ಳಿ ದೃಶ್ಯಗಳು ಪೂರ್ತಿಯಾಗಿ ಕೊಡೈಕೆನಾಲ್‍ನಲ್ಲಿ ಚಿತ್ರಿತವಾಗಿದೆ. ಕಥೆಯ ನಾಯಕಿ ಕಮಲಿ ಹಳ್ಳಿ ಹುಡುಗಿ. ಓದಿ ವಿದ್ಯಾವಂತೆಯಾಗಬೇಕೆಂಬ ಕನಸು.ಪಿಯುಸಿ ಮುಗಿದ ಬಳಿಕ ಪಟ್ಟಣಕ್ಕೆ ಹೋಗಿ ಓದಬೇಕೆಂಬ ಹಂಬಲ. ಆದ್ರೆ ಅಮ್ಮನೇ ಈಕೆಗೆ ಓದಿನ ವಿಚಾರದಲ್ಲಿ ಶತೃ.ಮಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗಲು ಅಮ್ಮ ಬಿಡುವುದಿಲ್ಲ. ಅಮ್ಮ ಮಗಳನ್ನು ಹಳ್ಳಿಯಲ್ಲೇ ಉಳಿಸಿಕೊಳ್ಳುವ ಯತ್ನದ ಹಿಂದೊಂದುರಹಸ್ಯವಿದೆ.ಅಮ್ಮನ ಮಾತು ಮೀರಿ ನಗರಕ್ಕೆ ಬರುವ ಕಮಲಿ ಓದು ಪೂರೈಸುತ್ತಾಳಾ ಅಥವಾದೊಡ್ಡದೊಂದು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಾಳಾ ಎಂಬ ಎಳೆಯ ಮೇಲೆ ಮುಂದಿನ ಕಥೆ ಸಾಗುತ್ತದೆ.
.
17 ವರ್ಷದ ಹಿಂದಿನ ರಹಸ್ಯವೊಂದು ನಗರದಲ್ಲಿ ತೆರೆದುಕೊಳ್ಳುತ್ತೆ. ಹಳ್ಳಿಯಿಂದ ಬಂದ ಕಮಲಿ ಪಟ್ಟಣದಲ್ಲಿ ಅನುಭವಿಸುವ ನೋವು, ನಲಿವಿನ ಗೊಂಚಲುಗಳು ಇಲ್ಲಿವೆ. ಪಟ್ಟಣದ ಪಯಣದಲ್ಲಿ ಕಮಲಿಗೆ ನಾಯಕ ಸಿಗುತ್ತಾನೆ. ಅವನಿಂದ ಈಕೆಯ ಬದುಕಿನಲ್ಲಿ ಎಂಥ ತಿರುವು ಸಿಗುತ್ತದೆ ಎಂಬ ಸುತ್ತಕಥೆ ಸಾಗುತ್ತದೆ.
ಕಿರುತೆರೆ ಜಗತ್ತಿನ ಜನಪ್ರಿಯ ನಿರ್ದೇಶಕರಾದ ಅರವಿಂದ್ ಕೌಶಿಕ್ ಈ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ. ಪದ್ಮವಾಸಂತಿ, ಯಮುನಾ ಶ್ರೀನಿಧಿ ಸೇರಿದಂತೆ ಅನೇಕ ನುರಿತಕಲಾವಿದರಿದ್ದಾರೆ..
.
ಇದೇ ಮೇ.28ರಿಂದ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 7 ರಿಂದ 7.30ರವರೆಗೆ ಜೀ ಕನ್ನಡ ವಾಹಿನಿಯಲ್ಲಿ‘ಕಮಲಿ’ ಪ್ರಸಾರವಾಗಲಿದೆ.
#Kamali #ZeeKannada #Cineloka
Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top